ಗೋಣಿಕೊಪ್ಪ ವರದಿ, ಏ. ೧೪: ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳ್ತೋಡು ಮುತ್ತಪ್ಪ ದೇವರ ಉತ್ಸವ ತಾ.೧೬ ಮತ್ತು ೧೭ ರಂದು ಜರುಗಲಿದೆ.
ತಾ. ೧೬ ರಂದು ಬೆ. ೭ ಗಂಟೆಗೆ ಗಣಪತಿ ಹೋಮ, ಸಂಜೆ ೭ ಗಂಟೆಗೆ ಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಅನ್ನದಾನ, ಪೈಂಗುತ್ತಿ, ಕರಿಕಲಲಶಂ, ತಿರುವಪ್ಪ ವೆಳ್ಳಾಟಂ ನಡೆಯಲಿದೆ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.