ಮಡಿಕೇರಿ, ಏ. ೧೪ : ಇಲ್ಲಿಗೆ ಸಮೀಪದ ಮಕ್ಕಂದೂರು ಗ್ರಾಮದ ಶ್ರೀ ಭದ್ರಕಾಳೇಶ್ವರಿ ದೇವಿಯ ವಾರ್ಷಿಕ ಉತ್ಸವ ತಾ.೭ರಿಂದ ಆರಂಭಗೊAಡಿದ್ದು, ತಾ.೧೭ರಂದು ದೊಡ್ಡ ಹಬ್ಬ ನಡೆಯಲಿದೆ.
ತಾ.೧೬ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭದ್ರಕಾಳೇಶ್ವರಿ ದೇವಿಯ ದೊಡ್ಡ ಹಬ್ಬ ನಡೆಯಲಿದೆ. ತಾ.೧೭ರಂದು ಮಧ್ಯಾಹ್ನ ೨ ಗಂಟೆಗೆ ಸಣ್ಣಹಬ್ಬದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಾಲಯ ಆಡಳಿತ ಮಂಡಳಿಯವರು ಹಾಗೂ ತಕ್ಕಮುಕ್ಕಾಟಿಗಳು ತಿಳಿಸಿದ್ದಾರೆ.