ಮಡಿಕೇರಿ, ಏ. ೧೩: ವಿಧಾನಸಭಾ ಚುನಾವಣೆ ಸಂಬAಧ ತಾ. ೧೩ ರಿಂದ ತಾ. ೨೦ ರವರೆಗೆ ನಾಮಪತ್ರಗಳ ಸ್ವೀಕೃತಿ, ತಾ. ೨೧ ರಂದು ನಾಮಪತ್ರಗಳ ಪರಿಶೀಲನೆ ಮತ್ತು ತಾ. ೨೪ ರವರೆಗೆ ನಾಮಪತ್ರಗಳ ವಾಪಾಸ್ಸಾತಿಗೆ ಚುನಾವಣಾ ವೇಳಾಪಟ್ಟಿ ಇರುತ್ತದೆ. ಈ ಅವಧಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಾದ ತಾಲೂಕು ಕಚೇರಿ ಆವರಣದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಯಾಗುವ ಸಂಭವ ಇರುತ್ತದೆ. ಎಲ್ಲಾ ರಾಜಕೀಯ ಪಕ್ಷದ ನಾಯಕರು ಮತ್ತು ಅವರ ಬೆಂಬಲಿಗರು ಒಂದೇ ಕಡೆ ಸೇರುವುದರಿಂದ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿಗೆ ಭಂಗ ಉಂಟಾಗುವAತಹ ಸಾಧ್ಯತೆಗಳಾಗಬಹುದು ಎಂಬ ನಿಟ್ಟಿನಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಅವರು ದಂಡ ಪ್ರಕ್ರಿಯಾ ಸಂಹಿತೆ ೧೯೭೩ರ ಕಲಂ ೧೪೪ ರೀತ್ಯಾ ಪ್ರತಿಬಂಧಕಾಜ್ಞೆ ವಿಧಿಸಿದ್ದಾರೆ.
ಚುನಾವಣಾಧಿಕಾರಿಗಳ ಕಚೇರಿಯಾದ ತಾಲೂಕು ಕಚೇರಿ ವ್ಯಾಪ್ತಿಯ ೧೦೦ ಮೀಟರ್ ಪ್ರದೇಶದಲ್ಲಿ ಸಾರ್ವಜನಿಕ ವಾಹನ ನಿಲುಗಡೆ ಪ್ರವೇಶ ಮತ್ತು ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಿದೆ ಹಾಗೂ ೫ ಜನರಿಗಿಂತ ಮೇಲ್ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದು ಮತ್ತು ಲಿಖಿತ ಪೂರ್ವಾನುಮತಿ ಪಡೆಯದೆ ಯಾವುದೇ ಮೆರವಣಿಗೆ, ಸಭೆ, ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.
ಜನರು ಯಾವುದೇ ಹಾನಿಕಾರಕ ಶಸ್ತಾçಸ್ತçಗಳು ಅಂದರೆ ಖಡ್ಗ, ಭಲ್ಲೆ, ಕೋವಿ, ಚಾಕು, ಚೂರಿ, ಲಾಠಿ, ಪಿಸ್ತೂಲು ಇತ್ಯಾದಿಗಳನ್ನು ಹೊಂದಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಸ್ಫೋಟಕ ಅಥವಾ ಬೆಂಕಿ ಹೊತ್ತಿಕೊಳ್ಳುವಂತಹ ವಸ್ತುಗಳನ್ನು ಹೊಂದಿ ತಿರುಗಾಡುವುದನ್ನು ನಿಷೇಧಿಸಲಾಗಿದೆ. ಪ್ರತಿಕೃತಿ, ಫ್ಲೆಕ್ಸ್, ಬ್ಯಾನರ್ ಇತ್ಯಾದಿಗಳನ್ನು ಹೊತ್ತು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ನೈತಿಕತೆಗೆ ಭಂಗ ತರುವಂತಹ ಅಥವಾ ಅಶಾಂತಿಗೆ ಪ್ರೇರೇಪಿಸುವಂತೆ ಕಿರುಚುವುದು, ಆಡುವುದು, ವಾದ್ಯಗಳನ್ನು ಬಾರಿಸುವುದು, ಸಂಜ್ಞೆಗಳನ್ನು ನೀಡುವುದು, ಚಿಹ್ನೆಗಳನ್ನು ತೋರಿಸುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
ಇವೆಲ್ಲಾ ಅಂಶಗಳನ್ನು ಉಲ್ಲಂಘಿಸಿ ಅಂತಹ ವಸ್ತುಗಳನ್ನು ಹೊಂದಿದ್ದಲ್ಲಿ ಆರಕ್ಷಕ ಸಿಬ್ಬಂದಿಯು ಅವರನ್ನು ನಿಶಸ್ತçಗೊಳಿಸಿ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಕಾನೂನು ಕ್ರಮ ಜರುಗಿಸಲಿದ್ದಾರೆ. ಈ ಆದೇಶ ತಾ. ೨೪ ರ ಮಧ್ಯರಾತ್ರಿ ೧೨ ಗಂಟೆವರೆಗೆ ಜಾರಿಯಲ್ಲಿರಲಿದೆ.