ಸುಂಟಿಕೊಪ್ಪ, ಏ. ೧೩: ಸುಂಟಿಕೊಪ್ಪ ಸಿ.ಎಸ್.ಐ. ಸಭೆಯ ವತಿಯಿಂದ ನೂತನ ದೇವಾಲಯ ಕಟ್ಟಡದ ಪ್ರತಿಷ್ಠಾಪನೆ ಹಾಗೂ ದೃಢೀಕರಣ ಸಂಸ್ಕಾರವು ತಾ. ೧೪ ರಂದು (ಇಂದು) ನೆರವೇರಲಿದೆ.

ನೂತನವಾಗಿ ಸಿ.ಎಸ್.ಐ. ಸಭೆಯ ವತಿಯಿಂದ ಇಮ್ಮಾನ್ಯೂವೆಲ್ ನೂತನ ದೇವಾಲಯದ ಲೋಕಾರ್ಪಣೆ ದೇವರ ವಾಕ್ಯದ ಸಂದೇಶವನ್ನು ಸಿ.ಐ.ಎಸ್., ಕೆ.ಎಸ್.ಡಿ. ಬಿಷಪ್ ರೈಟ್ ಹೇಮಚಂದ್ರಕುಮಾರ್ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಿ.ಐ.ಎಸ್., ಕೆ.ಎಸ್.ಡಿ. ವಿಶ್ರಾಂತ ಬಿಷಪ್‌ರುಗಳು, ಪದಾಧಿಕಾರಿಗಳು, ಮಂಗಳೂರು, ಉಡುಪಿ, ಕೊಡಗು, ಹಾಸನ, ಮೈಸೂರು, ಚಾಮರಾಜನಗರ ವಲಯದ ಅಧ್ಯಕ್ಷರುಗಳು, ಸಭೆಯಲ್ಲಿ ಸೇವೆ ಸಲ್ಲಿಸಿದ ಸಭಾಪಾಲಕರುಗಳು ಹಾಗೂ ಸಭಾಪಾಲಕ ರೆವ.ಅಮೃತರಾಜ್, ಸಭಾಸೇವಕರಾದ ಸಂಧ್ಯಾ ಸುಪ್ರೀತಾ ಆಗಮಿಸಲಿದ್ದಾರೆ.