ನಾಪೋಕ್ಲು, ಏ. ೧೩: ಸಮೀಪದ ನೆಲಜಿ ಶ್ರೀ ಭಗವತಿ (ಪೋವದಿಯಮ್ಮೆ) ದೇವಾಲಯಲ್ಲಿ ವಾರ್ಷಿಕ ಉತ್ಸವವು ತಾ. ೧೪ ಮತ್ತು ೧೫ ರಂದು ನಡೆಯಲಿದೆ. ೧೪ ರಂದು (ಇಂದು) ಎತ್ತು ಪೋರಾಟ, ಆಂಗೋಲ ಪೊಂಗೋಲ ಸೇವೆ, ವಿವಿಧ ಪೂಜಾ ಸೇವೆಗಳು, ಪ್ರಸಾದ ವಿತರಣೆ ಮತ್ತು ದೇವರ ನೃತ್ಯ ಬಲಿ ನಡೆಯಲಿದೆ.

ತಾ. ೧೫ ರಂದು ಸಂಜೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪೀಲಿ ಆಟ್, ದೇವಿಯ ನೃತ್ಯ ಬಲಿ ಹಾಗೂ ಪೂಜಾ ಸೇವೆಗಳು ನಡೆಯಲಿವೆ.