ವೀರಾಜಪೇಟೆ, ಏ. ೧೨: ಸದ್ಭಾವನಾ ಮಂಚ್ ಆಶ್ರಯದಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಇಫ್ತಾರ್ ಕೂಟ ತಾ. ೧೩ರಂದು (ಇಂದು) ಸಂಜೆ ೫.೧೫ಕ್ಕೆ ಪಂಜರ್‌ಪೇಟೆಯ ಸಿ.ಎಂ. ಪ್ಯಾಲೇಸ್‌ನಲ್ಲಿ ನಡೆಯಲಿದೆ.

ಸದ್ಭಾವನಾ ಮಂಚ್ ಅಧ್ಯಕ್ಷ ಡಾ||. ಎಂ.ಸಿ. ಕಾರ್ಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ರಾಜ್ಯ ಕಾರ್ಯದರ್ಶಿ ರಿಯಾಜ್ ಅಹಮದ್ ರೋಣ ರಂಜಾನ್ ಸಂದೇಶ ನೀಡಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಪೆರಿಗ್ರಿನ್ ಎಸ್.ಮಚ್ಚಾಡೋ, ಸದ್ಭಾವನಾ ಮಂಚ್ ಕಾರ್ಯಾಧ್ಯಕ್ಷ ಎ.ಎನ್. ರವಿ ಉತ್ತಪ್ಪ, ಜಮಾಅತೆ ಇಸ್ಲಾಮೀ ಹಿಂದ್ ಜಿಲ್ಲಾ ಅಧ್ಯಕ್ಷ ಪಿ.ಕೆ. ಅಬ್ದುಲ್ ರೆಹೆಮಾನ್, ಸ್ಥಾನೀಯ ಅಧ್ಯಕ್ಷ ಕೆ.ಪಿ.ಕೆ. ಮುಹಮ್ಮದ್ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.