ಮಡಿಕೇರಿ, ಏ. ೧೨: ಮಾದಕ ವಸ್ತು ಮಾರಾಟ ಯತ್ನ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ದಿನಾಂಕ ೧೧.೧೦.೨೦೧೭ರಂದು ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹಾಕತ್ತೂರಿನಲ್ಲಿ ಮೂರ್ನಾಡಿನಿಂದ ಮಡಿಕೇರಿಗೆ ತೆರಳುವ ರಸ್ತೆ ಬದಿಯಲ್ಲಿ ವೀರಾಜಪೇಟೆ ವಿಜಯನಗರ ನಿವಾಸಿ ಮೊಹಮ್ಮದ್ ತಾರಿಕ್ ಎಂಬಾತ ತನ್ನ ಹೋಂಡಾ ಆ್ಯಕ್ಟಿವಾ ಸ್ಕೂಟರ್ (ಕೆಎ-೧೨- ಕ್ಯೂ-೧೨೪೭)ನಲ್ಲಿ ವೀರಾಜಪೇಟೆ ಕಡೆಯಿಂದ ಮಡಿಕೇರಿಯತ್ತ ಮಾದಕ ವಸ್ತು ಚರಸ್ ಅನ್ನು ಅಕ್ರಮವಾಗಿ ಮಾರಾಟಕ್ಕೆಂದು ಸಾಗಿಸುತ್ತಿದ್ದ ಸಂದರ್ಭ ಪೊಲೀಸರು ಆತನನ್ನು ಬಂಧಿಸಿದ್ದರು. ಬಂಧಿತನಿAದ ಅಂದಾಜು ೧,೨೦,೦೦೦ ರೂ. ಮೌಲ್ಯದ ಒಟ್ಟು ೩೦೦ ಗ್ರಾಂ ಚರಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಆಗಿದ್ದ ಚೇತನ್ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಎಂ. ಭೃಂಗೇಶ್ ಅವರು ಆರೋಪಿಯ ವಿರುದ್ಧ ಆರೋಪ ಸಾಬೀತಾದ್ದರಿಂದ ಆರೋಪಿಗೆ ೪ ವರ್ಷ ಕಠಿಣ ಶಿಕ್ಷೆ, ೨೦ ಸಾವಿರ ದಂಡ ವಿಧಿಸಿ ದಿನಾಂಕ ೨೯.೩.೨೦೨೩ರಂದು ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ೬ ತಿಂಗಳ ಕಠಿಣ ಸಜೆ ಅನುಭವಿಸುವಂತೆ ಆದೇಶಿಸಿದ್ದಾರೆ. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಕೆ.ಜಿ. ಅಶ್ವಿನಿ ವಾದಿಸಿದರು.