ವೀರಾಜಪೇಟೆ, ಏ. ೧೨: ವೀರಾಜಪೇಟೆ ಪಟ್ಟಣದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ, ವಿಷ್ಣುಮೂರ್ತಿ, ನಾಗ ದೇವರ ಪ್ರತಿಷ್ಠಾ ವರ್ದಂತಿ ವಾರ್ಷಿಕೋತ್ಸವವು ಶ್ರದ್ದಾಭಕ್ತಿ ಹಾಗೂ ವಿಜೃಂಭಣೆಯಿAದ ನಡೆಯಿತು.

ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಿಗ್ಗೆ ೮ ಗಂಟೆಗೆ ಪ್ರಧಾನ ಕಳಸ ಹೋಮ, ದುರ್ಗಾ ಹೋಮ, ಆಶ್ಲೇಷ ಬಲಿ, ವಿಷ್ಣು ಸಹಸ್ರ ನಾಮ, ತುಳಸಿ ಅರ್ಚನೆ, ಕಳಸ ಅಭಿಷೇಕ ಹಾಗೂ ವಿಶೇಷ ಪೂಜೆಗಳು ನಡೆದು ಮದ್ಯಾಹ್ನ ೧೨.೩೦ ಕ್ಕೆ ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಡೆಯಿತು.

ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು. ಉತ್ಸವಕ್ಕೆ ಪಟ್ಟಣ ಹಾಗೂ ದೂರದ ಊರುಗಳಿಂದಲೂ ಭಕ್ತರು ಆಗಮಿಸಿದ್ದರು.