ಮಡಿಕೇರಿ, ಏ. ೧೨: ಕೊಡಗಿನ ಹೆಸರಾಂತ ಸಾಹಿತಿ ಪರದಂಡ ದಿ. ಚಂಗಪ್ಪ ಅವರ ಸಂಸ್ಮರಣೆ ಅಂಗವಾಗಿ ಅಲ್ಲಾರಂಡ ರಂಗ ಚಾವಡಿ ವತಿಯಿಂದ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಕಥನ, ವೈಭವ, ಗ್ರಾಮೀಣ ಪ್ರದೇಶದ ಜನಜೀವನದ ಬಗ್ಗೆ ಕ್ಷೇತ್ರಾಧ್ಯನ ಮೂಲಕ ಚಂಗಪ್ಪ ಅವರು ಪುಸ್ತಕ ರಚಿಸಿದ್ದಾರೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ಮುಟ್ಟಿಸುವ ಸಲುವಾಗಿ ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದರ ಭಾಗವಾಗಿ ಲೇಖನ ಸ್ಪರ್ಧೆ ಆಯೋಜಿಸಲಾಗಿದೆ. ೧೦೫ನೇ ಜಯಂತಿ ಅಂಗವಾಗಿ ಅವರ ಎರಡು ಪುಸ್ತಕಗಳ ಬಗ್ಗೆ ಕೊಡಗಿನ ಸಾಹಿತಿಗಳಿಂದ ವಿಮರ್ಶನ ಲೇಖನ, ನಾ ಬಲ್ಲಂತೆ ಪರದಂಡ ಚಂಗಪ್ಪ ವಿಷಯದಲ್ಲಿ ಲೇಖನ ಬರೆದು ತಾ.೩೦ರೊಳಗೆ vಣಟ.ಛಿooಡಿg@gmಚಿiಟ.ಛಿom ಗೆ ಕಳುಹಿಸುವಂತೆ ಕೋರಿದ ಅವರು, ಆಯ್ಕೆಯಾದ ಮೂರು ಲೇಖನಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ಡಾ. ನಡಿಕೇರಿಯಂಡ ಪೂವಯ್ಯ ಹಾಜರಿದ್ದರು.