ವೀರಾಜಪೇಟೆ, ಏ. ೧೨: ಬಿಟ್ಟಂಗಾಲ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪೊನ್ನಿಮನೆ ಅಯ್ಯಪ್ಪ ಮತ್ತು ಬೋಟೆ ಚಾಮುಂಡಿ ದೇವರ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು.
ಉತ್ಸವದ ಅಂಗವಾಗಿ ಭಂಡಾರ ಹೊರಡುವುದು, ದೇವಸ್ಥಾನದಲ್ಲಿ ಕೊಟ್ಟಿ ಪಾಟ್ ಮತ್ತು ಬೋಟೆ ಚಾಮುಂಡಿ, ವಿಷ್ಣುಮೂರ್ತಿ ದೇವರ ತೆರೆ ಸೇರಿದಂತೆ ವಿವಿಧ ತೆರೆಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆದವು.