v ಪಂಚಾಯಿತಿ ಅಧ್ಯಕ್ಷೆ ಹಾಗೂ ಸದಸ್ಯರ ಗುಂಪುಗಾರಿಕೆ v ಜಿ.ಪಂ. ಸಿ.ಇ.ಓ.ಗೆ ದೂರು
ಕಣಿವೆ, ಏ. ೧೧: ಕುಶಾಲನಗರ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ಆಡಳಿತ ಕಳೆದ ಹಲವಾರು ತಿಂಗಳಿAದ ಹಳಿ ತಪ್ಪಿದೆ. ಪಂಚಾಯಿತಿಯ ಅಧ್ಯಕ್ಷೆ ವಿರುದ್ಧ ಇಡೀ ಚುನಾಯಿತ ಸದಸ್ಯರ ತಂಡ ಮುಗಿಬಿದ್ದಿದೆ.
ಒಟ್ಟು ೧೫ ಮಂದಿ ಸದಸ್ಯ ಬಲದ ಪಂಚಾಯಿತಿಯಲ್ಲಿ ಮಹಿಳಾ ಉಪಾಧ್ಯಕ್ಷೆ ತಟಸ್ಥ ಧೋರಣೆ ಅನುಸರಿಸಿದ್ದಾರೆ. ಇನ್ನು ಸೀಗೆಹೊಸೂರು ಭಾಗದಿಂದ ಚುನಾಯಿತರಾಗಿರುವ ಮತ್ತೋರ್ವ ಮಹಿಳಾ ಸದಸ್ಯೆ ಹೊರತುಪಡಿಸಿ ಉಳಿದ ೧೨ ಮಂದಿ ಒಟ್ಟು ಸದಸ್ಯರು ಪಂಚಾಯಿತಿ ಮಹಿಳಾ ಅಧ್ಯಕ್ಷೆಯ ಮೇಲೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದಾರೆ. ಆಕೆಯ ಪತಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬುದು ಮುಖ್ಯ ಆರೋಪ.
ಪಂಚಾಯಿತಿಯ ಅಭಿವೃದ್ಧಿ ವಿಚಾರದಲ್ಲಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಸದಸ್ಯರೊಂದಿಗೆ ಹೊಂದಾಣಿಕೆ ಇಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿಶ್ವಾಸಗಳಿಸದೆ ಅವರ ಮೇಲೆ ಅಪನಂಬಿಕೆ ಹೊಂದಿರುವ ಅಧ್ಯಕ್ಷರು ತಮ್ಮ ಪತಿಗೆ ದಾಖಲಾತಿ ಗಳನ್ನು ತೋರಿಸಿ ಅವರು ಹೇಳಿದರೆ ಮಾತ್ರ ಸಹಿ ಹಾಕುತ್ತಿದ್ದಾರೆ ಎಂದು ಆರೋಪಿಸುತ್ತಾರೆ.
ಅಷ್ಟೇಅಲ್ಲ ಪಂಚಾಯಿತಿ ವ್ಯಾಪ್ತಿಯ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಚುನಾಯಿತ ಜನಪ್ರತಿನಿಧಿಗಳ ಮೇಲೆ ಅನಗತ್ಯವಾದ ಸುಳ್ಳು ದೂರುಗಳನ್ನು ಪೊಲೀಸ್ ಠಾಣೆಗೆ ನೀಡುವ ಮೂಲಕ ಅನಗತ್ಯ ಸಂಘರ್ಷಕ್ಕೆ ದಾರಿ ಮಾಡಿದ್ದಾರೆ ಎಂಬುದು ಉಳಿದ ೧೨ ಮಂದಿ ಸದಸ್ಯರ ಆರೋಪ.
ಈಗಾಗಲೇ ಘೋಷಣೆ ಯಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆಗೂ ತಿಂಗಳುಗಳ ಮೊದಲೇ ಪಂಚಾಯಿತಿಯಲ್ಲಿ ಸರ್ವ ಸದಸ್ಯರ ಸಭೆ ನಡೆಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗದAತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಸಂಬAಧ ಹಲವು ಮಹತ್ತರವಾದ ನಿರ್ಧಾರಗಳನ್ನು ಈ ಮೊದಲೇ ಕೈಗೊಳ್ಳಬೇಕಿತ್ತು.
ಮಾರ್ಚ್ ೩೧ ರೊಳಗೆ ಸಭೆ ನಡೆಸಿ ಮುಂದಿನ ಸಾಲಿನ ಆಯವ್ಯಯ ಪಟ್ಟಿ ಬಿಡುಗಡೆಗೊಳಿಸಬೇಕಿತ್ತು. ಜೊತೆಗೆ ಪಂಚಾಯಿತಿಗೆ ಸಾರ್ವಜನಿಕರು ಕಟ್ಟಬೇಕಾದ ವಿವಿಧ ತೆರಿಗೆಗಳ ಸಂಗ್ರಹಗಳು ಸೇರಿದಂತೆ ಇನ್ನಿತರ ಅಭಿವೃದ್ಧಿ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತು.
ಆದರೆ ಅದ್ಯಾವುದಕ್ಕೂ ಅವಕಾಶ ಮಾಡಿಕೊಡದ ಅಧ್ಯಕ್ಷೆಯ ವರ್ತನೆ ವಿರುದ್ಧ ಪಂಚಾಯಿತಿಯ ಇಡೀ ಚುನಾಯಿತ ಮಂಡಳಿ ಧ್ವನಿ ಎತ್ತಿದರೂ ಕೂಡ ಸಂಬAಧಪಟ್ಟ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಮ್ಮ ಕೋರಿಕೆ ಹಾಗೂ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸದಸ್ಯರ ದೂರು. ಆದಾಗ್ಯೂ ತಡವಾಗಿಯಾದರೂ ಪಂಚಾಯಿತಿಯ ಸದಸ್ಯರ ಕೋರಿಕೆಯನ್ನು ಪರಿಶೀಲನೆ ನಡೆಸಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಸ್. ಆಕಾಶ್, ಈ ಸಂಬAಧಿತವಾಗಿ ಕುಶಾಲನಗರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಎಂಬವರಿಗೆ ಪತ್ರ ಬರೆದು ಕೂಡಲೇ ಕೂಡಿಗೆ ಗ್ರಾಮ ಪಂಚಾಯಿತಿ ಸಭೆ ಕರೆದು ಸದಸ್ಯರ ಅಹವಾಲು ಆಲಿಸಿ ವರದಿ ನೀಡುವಂತೆ ಸೂಚಿಸಿದ್ದರ ಮೇರೆಗೆ ತಾ.ಪಂ. ಇಓ ಜಯಣ್ಣ ಅವರು ಕರೆದ ಸಭೆಗೆ ಸ್ವತಃ ಅಧ್ಯಕ್ಷೆ ಮಂಗಳಾ ಪ್ರಕಾಶ್ ಗೈರು ಹಾಜರಾಗಿದ್ದರು.
ಬಳಿಕ ಅಧ್ಯಕ್ಷೆಯ ಉಪಸ್ಥಿತಿ ಯಲ್ಲಿ ಸಭೆ ನಡೆದರೆ ಸದಸ್ಯರು ತಾ.ಪಂ. ಅಧಿಕಾರಿಗೆ ಹೇಳುವ ದೂರುಗಳು ಕಡತಗಳಲ್ಲಿ ದಾಖಲಾಗುತ್ತವೆ. ಹಾಗಾಗಿ ದೂರು ಹೇಳಿಕೊಳ್ಳಬೇಕಿರುವ ಅಧ್ಯಕ್ಷೆಯೇ ಸಭೆಗೆ ಬರದ ಮೇಲೆ ಸಭೆಯ ಔಚಿತ್ಯವೇ ಇಲ್ಲ ಎಂದು ಸಭೆ ಮುಂದೂಡಲ್ಪಟ್ಟಿತು.
ಆಡಳಿತ ವ್ಯವಸ್ಥೆ ಮೇಲೆ ಸಾರ್ವಜನಿಕರು ಗರಂ
ಪAಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ಗುಂಪುಗಾರಿಕೆಯಿAದಾಗಿ ಯಾವುದೇ ಸಾಮಾನ್ಯ ಸಭೆಗಳು ನಡೆಯದೆ ಗ್ರಾಮಾಭಿವೃದ್ಧಿಯ ಯೋಜನೆಗಳು ಕಾರ್ಯಗತವಾಗದ ಕಾರಣ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ಆಡಳಿತ ವ್ಯವಸ್ಥೆ ವಿರುದ್ಧ ಮಾರುಕಟ್ಟೆಗಳ ಹರಾಜು ಕೂಡ ಮಾಡುವಂತಿಲ್ಲ. ಈ ಆಡಳಿತ ಮಂಡಳಿಯನ್ನು ನಂಬಿ ಈಗಾಗಲೇ ಹಲವು ತುರ್ತು ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೂ ಬಿಲ್ ಪಾವತಿ ಮಾಡಿಲ್ಲ.
ಪಂಚಾಯಿತಿ ಚುನಾಯಿತರ ನಿರಂತರ ಗದ್ದಲದಿಂದ ಬೇಸತ್ತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಶಾ ಅವರು ಈ ಪಂಚಾಯಿತಿ ಸಹವಾಸ ಬೇಡಬೇ ಬೇಡ ಎಂದು ಬದಲೀ ಪಂಚಾಯಿತಿಗೆ ಹೋಗಿದ್ದಾರೆ. ಇದೀಗ ಈ ಕೂಡಿಗೆ ಪಂಚಾಯಿತಿಗೆ ಅಂಜನಾದೇವಿ ಎಂಬವರು ಅಭಿವೃದ್ಧಿ ಅಧಿಕಾರಿಯಾಗಿ ಬಂದಿದ್ದಾರೆ.
ಆದರೆ ಪಂಚಾಯಿತಿಯಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಲ್ಲಿ ಒಮ್ಮತ ಏರ್ಪಡದ ಹೊರತು ಯಾವುದೇ ಅಭಿವೃದ್ಧಿ ಅಸಾಧ್ಯ. ಹಾಗಾಗಿ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಈ ಪಂಚಾಯಿತಿಯ ಚುನಾಯಿತರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಮನವರಿಕೆ ಮಾಡಬೇಕು. ಜೊತೆಗೆ ಸೂಕ್ತ ತಿಳುವಳಿಕೆ ಅಥವಾ ಎಚ್ಚರಿಕೆ ನೀಡುವ ಮೂಲಕ ಪಂಚಾಯಿತಿಯ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದೆ ಅಷ್ಟೆ.
- ಕೆ.ಎಸ್. ಮೂರ್ತಿ