ಮಡಿಕೇರಿ, ಏ. ೧೧: ವೀರಾಜಪೇಟೆಯ ಸರ್ವೋದಯ ಶಿಕ್ಷಣ ಸಂಸ್ಥೆಯ ೨೦೨೨-೨೩ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ದಯಾನಂದ ಕೆ.ಸಿ. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉತ್ತಮ ಧ್ಯೇಯ ಹಾಗೂ ಗುರಿಗಳಿರಬೇಕು ಹಾಗೂ ಪಡೆಯುವ ವಿದ್ಯೆಯನ್ನು ಸಮರ್ಪ ಕವಾಗಿ ಬಳಸಬೇಕು ಎಂದರು. ಕಾಲೇಜಿನ ಪ್ರಾಂಶುಪಾಲೆ ಡಾ. ವಾಣಿ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಕೋಶಾಧಿಕಾರಿ ವಾಸಂತಿ ವಹಿಸಿದ್ದರು. ಶ್ರೀ ರಕ್ಷಾ ಪ್ರಾರ್ಥಿಸಿ, ಮಮತಾ ಸ್ವಾಗತಿಸಿದರು. ಮೇರಿ ರಜಿನಾ ಹಾಗೂ ಕರಿಶ್ಮಾ ನಿರೂಪಿಸಿ, ಕಾವೇರಮ್ಮ ವಂದಿಸಿದರು.