ನಾಪೋಕ್ಲು, ಏ. ೧೧: ಸಮೀಪದ ಕಕ್ಕಬೆಯ ಕುಂಜಿಲ ನಾಲಡಿ ಗ್ರಾಮದ ನಾಲ್ಕೇರಿ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ೧೩ನೇ ವಾರ್ಷಿಕ ಉತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿ ಮಹಾಪೂಜೆ ತೀರ್ಥ ಪ್ರಸಾದ ವಿತರಣೆಯ ಬಲಿಕ ದೇವರ ನೃತ್ಯ ಬಲಿ, ಅಲಂಕಾರ ಪೂಜೆ, ದೇವರ ಜಳಕ, ದರ್ಶನ ಬಲಿ, ನೆರವೇರಿದವು.

ಪೂಜಾ ವಿಧಿ ವಿಧಾನವನ್ನು ಅರ್ಚಕರಾದ ರಮೇಶ್ ಶರ್ಮ ಹಾಗೂ ಸುರೇಶ್ ಶರ್ಮ ನೆರ ವೇರಿಸಿದರು. ಈ ಸಂದರ್ಭ ಉತ್ಸವ ದಲ್ಲಿ ತಕ್ಕಮುಖ್ಯಸ್ಥರಾದ ನಂಬುಡುಮAಡ ಸುಬ್ರಮಣಿ, ಕಂಬೆಯAಡ ಪಳಂಗಪ್ಪ, ಆಡಳಿತ ಮಂಡಳಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ಮಾಜಿ ಅಧ್ಯಕ್ಷ ಕಲ್ಯಾಟಂಡ ಮುತ್ತಪ್ಪ ಸೇರಿದಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.