ನಾಪೋಕ್ಲು, ಏ. ೧೧: ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿಯ ಪೇರೂರಿಯನ್ಸ್ ಹಾಕಿ ಕೋಚಿಂಗ್ ಕ್ಯಾಂಪ್ ವತಿಯಿಂದ ಆಯೋಜಿಸಲಾಗಿರುವ ಉಚಿತ ಕ್ರೀಡಾ ತರಬೇತಿ ಶಿಬಿರವನ್ನು ಪೇರೂರು ಪ್ರಾಥಮಿಕ ಶಾಲಾ ಮೈದಾನದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ಮೂವೇರ ಪಟ್ಟು ಪೆಮ್ಮಯ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ ಹಾಗೂ ಮಂಡಲ ಮಾಜಿ ಪ್ರಧಾನ ಮೂವೇರ ನಾಣಪ್ಪ ಉದ್ಘಾಟಿಸಿ, ಶುಭ ಕೋರಿದರು.
ಈ ಸಂದರ್ಭ ಶಿಬಿರ ಸಂಚಾಲಕರು ಗ್ರಾಮ ಪಂಚಾಯಿತಿ ಸದಸ್ಯರೂ ಆದ ಮಚ್ಚೂರ ರವೀಂದ್ರ. ಗ್ರಾಮ ಪಂಚಾಯಿತಿ ಸದಸ್ಯರಾದ ಚೋಕಿರ ಬಾಬಿ ಭೀಮಯ್ಯ, ಚಂಗೇಟ್ಟಿರ ಕುಮಾರ್ ಸೋಮಣ್ಣ, ಸಂತೋಷ ದೇವಯ್ಯ, ಅಯ್ಯಪ್ಪ, ತರಬೇತಿದಾರ ಮಾಜಿ ಸೈನಿಕ ಕುಮ್ಮಂಡ ವಿಠಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿಬಿರ ೧೮ ವರ್ಷಕ್ಕೆ ಒಳಪಟ್ಟ ಮಕ್ಕಳಿಗೆ ತಾ. ೧೧ ರಿಂದ ಏಪ್ರಿಲ್ ೨೮ರ ವರೆಗೆ ಪೇರೂರು ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಬೆಳಿಗ್ಗೆ ೬:೩೦ ಗಂಟೆಯಿAದ ಬೆಳಿಗ್ಗೆ ೯ ಗಂಟೆವರೆಗೆ ಜರುಗಲಿದೆ.