ಗುಡ್ಡೆಹೊಸೂರು, ಏ. ೧೧: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದ ಸಮೀಪದ ಕಾವೇರಿ ನದಿಯಲ್ಲಿ ಅಪ್ಪ - ಮಗ ನೀರು ಪಾಲಾಗಿದ್ದಾರೆ. ಶನಿವಾರಸಂತೆ ನಿವಾಸಿಗಳಾದ ಮಣಿಕಂಠ (೪೭) ಮತ್ತು ಮಗ ಪ್ರೀತಂ (೧೫) ನೀರುಪಾಲಾಗಿದ್ದಾರೆ. ಶಬರಿಮಲೆಗೆ ತೆರಳಲು ತಮ್ಮ ಸಂಬAಧಿಕರ ಮನೆ ಚಿಕ್ಕಬೆಟ್ಟಗೇರಿಯ ಅಂಬಾಡಿ ರವಿ ಅವರ ಮನೆಗೆ ಬಂದಿದ್ದರು.

ಇAದು ಶಬರಿಮಲೆಗೆ ತೆರಳಲು ಕುಶಾಲನಗರದಲ್ಲಿ ದೇವಸ್ಥಾನದಲ್ಲಿ ಪೂಜೆ ನಡೆಸಬೇಕಿತ್ತು. ಒಟ್ಟು ೬ ಮಂದಿ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆ ಸಂಬAಧ ಮೂವರು ಮನೆಯ ಪಕ್ಕದ ಕಾವೇರಿ ನದಿಗೆ ಸ್ನಾನಕ್ಕೆ ತೆರಳಿದ್ದಾರೆ. ಈ ವೇಳೆ ನೀರಿನಲ್ಲಿ ಮುಳುಗುತ್ತಿರುವ ಮಗನನ್ನು ರಕ್ಷಿಸಲು ಹೋಗಿ ತಂದೆ, ಮಗ ಇಬ್ಬರು ನೀರುಪಾಲಾಗಿದ್ದಾರೆ. ಸ್ಥಳೀಯರು ಮತ್ತು ಅಗ್ನಿಶಾಮಕದಳದವರು ನಿರಂತರ ಪ್ರಯತ್ನ ನಡೆಸಿ ಮೃತದೇಹಗಳನ್ನು ಹೊರತೆಗೆದು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. - ಗಣೇಶ್ ಕುಡೆಕಲ್