ವೀರಾಜಪೇಟೆ, ಏ. ೧೧: ಬೈರನಾಡು-ದೇವಣಗೇರಿ ಶ್ರೀ ಈಶ್ವರ-ಭಗವತಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ತಾ. ೩ ರಂದು ಪೂರ್ವಾಹ್ನ ೯ ಗಂಟೆಗೆ ಮಹಾಗಣಪತಿ ಹೋಮದೊಂದಿಗೆ ಪ್ರಾರಂಭಗೊAಡಿತು. ತೋರಣ ಮುಹೂರ್ತ, ಮೃತ್ಯುಂಜಯ ಹೊಮ, ಕಲಾಶಾಭಿಷೇಕ ನಡೆಯಿತು. ಸಂಜೆ ೭ ಗಂಟೆಗೆ ತಕ್ಕರ ಮನೆಯಿಂದಸ ಭಂಡಾರ, ಕೊಡಿಮರ ಪೂಜೆ, ದೇವರ ಕಟ್ಟು ಬೀಳುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಪ್ರತಿದಿನ ಪ್ರಾತಃಕಾಲ ದೇವರ ಬಲಿ, ನಿತ್ಯಪೂಜೆ, ಕೊಡಿಮರ ಪೂಜೆ, ಸಂಜೆ ೬.೩೦ ಗಂಟೆಗೆ ತಂತ್ರಕೊಡೆ ದೇವರ ಬಲಿ, ದೀಪಾರಾದನೆ, ದೇವರ ನೃತ್ಯ, ಮಾಪೂಜೆ, ಪ್ರಸಾದ ವಿನಿಯೋಗ ನಡೆಯಿತು. ತಾ. ೬ ರಂದು ನಿತ್ಯಪೂಜೆ ಹಾಗೂ ಇತರ ಪೂಜೆಗಳು ಸೇರಿದಂತೆ ದೇವರ ಬನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ದೇವಾಲಯದಲ್ಲಿ ವಸಂತಪೂಜೆ ನೆರವೇರಿತು. ತಾ. ೮ ರಂದು ಸಂಜೆ ೪.೩೦ ಗಂಟೆಗೆ ದೇವರ ಅವಭೃತ ಸ್ನಾನ, ಅಲಂಕಾರ ಪೂಜೆ, ದೇವರ ನೃತ್ಯ ನಡೆಯಿತು. ಪ್ರಸಾದ ವಿನಿಯೋಗ ನಡೆಯಿತು. ಪ್ರಧಾನ ಅರ್ಚಕ ಪ್ರಕಾಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಶಾಸಕ ಕೆ.ಜಿ. ಬೋಪಯ್ಯ ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯ ಸಮಿತಿ ಅಧ್ಯಕ್ಷ ಮುಕ್ಕಾಟಿರ ರಾಜಪ್ಪ ಪೂವಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಸುತ್ತಮುತ್ತಲ ಗ್ರಾಮಸ್ಥರು ಭಾಗಿಯಾಗಿದ್ದರು.