ಮಡಿಕೇರಿ, ಏ. ೧೧: ಆಟೋಟಗಳು ಅನೇಕ ರೀತಿಯಲ್ಲಿ ಜೀವನ ಪಾಠಗಳನ್ನು ಕಲಿಸುವು ದರಿಂದ ಪ್ರತಿಯೋರ್ವರೂ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಕೂಡಿಗೆ ಕ್ರೀಡಾಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಕರೆ ನೀಡಿದರು.

ವೀರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಪ್ರಸಾದ ಭವನದಲ್ಲಿ ಆಯೋಜಿತ ೨೦೯ನೇ ಹೊಂಬೆಳಕು ತತ್ವ ಚಿಂತನಾಗೋಷ್ಠಿ ಕಾರ್ಯಕ್ರಮ ದಲ್ಲಿ ಕುಂತಿ ಟೀಚರ್ ಸಾಕ್ಷö್ಯಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆಯಂತೆ ಜೀವನದಲ್ಲಿ ಕೂಡ ಎದುರಾಗುವ ಸೋಲು-ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಇಂತಹ ಮನೋಭಾವನೆಯನ್ನು ಜೀವನದಲ್ಲಿ ಕ್ರೀಡೆ ಕಲಿಸುತ್ತದೆ. ಆಧುನಿಕ ಯುಗದಲ್ಲಿ ಮೊಬೈಲ್ ಆಟದತ್ತಲೇ ಮಕ್ಕಳು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಹೀಗಾಗಿ ಮಾನಸಿಕ ವಾಗಿಯೂ, ದೈಹಿಕವಾಗಿಯೂ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಕುಂತಿ ಕಳವಳ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಅತ್ಯಂತ ಅಗತ್ಯ. ಮಾನಸಿಕ ಉಲ್ಲಾಸಕ್ಕೆ ಕ್ರೀಡೆ ಸಹಕಾರಿ. ಜತೆಗೆ ಕ್ರೀಡೆ ವ್ಯಕ್ತಿಯ ಮನೋಸ್ಥೆöÊರ್ಯದೊಂದಿಗೆ ಉತ್ಸಾಹವನ್ನೂ ಹೆಚ್ಚಿಸುವುದಲ್ಲದೆ ಸಂಘಟನಾ ಚಾತುರ್ಯಕ್ಕೂ ಕಾರಣವಾಗಿದೆ ಎಂದು ಕ್ರೀಡೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.

ಅರಮೇರಿ ಕಳಂಚೇರಿ ಮಠದ ಪೀಠಾಧೀಶ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕುಂತಿ ಟೀಚರ್ ಸಾಕ್ಷö್ಯಚಿತ್ರದ ಕನಸು ಕಣ್ಣುಗಳಿಗೆ ಬೆಳಕಾದ ತಾರೆ ಎಂಬ ಉಪ ಶೀರ್ಷಿಕೆಗೆ ತಕ್ಕಂತೆ ಕುಂತಿ ಬೋಪಯ್ಯ ಅನೇಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ರಾಷ್ಟç, ಅಂರ‍್ರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಲು ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.

ವಿವಿಧ ಮನೋಭಾವ, ವಯೋಮಾನದ ವಿದ್ಯಾರ್ಥಿಗಳನ್ನು ಮನಸ್ಥಿತಿಯನ್ನು ತಿದ್ದಿತೀಡಿ ಉತ್ತಮ ವಿದ್ಯಾರ್ಥಿಗಳನ್ನಾಗಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟ ಸ್ವಾಮೀಜಿ, ಪ್ರಭಾವೀ ರಾಜಕಾರಣಿಯ ಪತ್ನಿಯಾಗಿಯೂ ರಾಜಕೀಯದಿಂದ ದೂರವಾಗಿ, ತನ್ನ ವೃತ್ತಿ ಸಾಧನೆ ಯನ್ನು ವ್ಯಕ್ತಿಗತವಾಗಿ ಮಾಡಿರುವ ಕುಂತಿ ಬೋಪಯ್ಯ ಎಲ್ಲಾ ರಾಜಕಾರ ಣಿಗಳ ಪತ್ನಿಯರಿಗೂ ಮಾದರಿ ಯಾಗಿದ್ದಾರೆ. ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾದ ಮೇಲೂ ಸಮಾಜ ಸೇವಾ ಮನೋಭಾವವನ್ನು ಕುಂತಿ ಅವರು ಹೊಂದಿರುವುದು ಶ್ಲಾಘನೀಯ ಎಂದರು. ಕುಂತಿ ಟೀಚರ್ ಸಾಕ್ಷö್ಯಚಿತ್ರ ನಿರ್ದೇಶಕ ಅನಿಲ್ ಎಚ್.ಟಿ. ಮಾತನಾಡಿ, ಅರಮೇರಿ ಮಠದಲ್ಲಿ ೧೭ ವರ್ಷಗಳಿಂದ ನಿರಂತರವಾಗಿ ಮಾಸಿಕ ತತ್ವ ಚಿಂತನಾಗೋಷ್ಠಿ ಹೊಂಬೆಳಕು ಕಾರ್ಯಕ್ರಮ ನಡೆಯುತ್ತಿರುವುದು ರಾಜ್ಯದಲ್ಲಿಯೇ ದಾಖಲೆಯಾಗಿದೆ. ಇಂತಹ ಚಿಂತನಾ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಗತ್ಯ ಎಂದರು. ಸಾಕ್ಷö್ಯಚಿತ್ರ ಹೆಸರೇ ಹೇಳುವಂತೆ ಎಲ್ಲೂ ಉತ್ಪೇಕ್ಷೆಯಿಲ್ಲದೇ ವ್ಯಕ್ತಿಯ ಸಾಧನೆಯನ್ನು ಸಾಕ್ಷೀಕರಿಸುವ ದಾಖಲೆಯಾಗಿದೆ ಎಂದು ಅನಿಲ್ ಹೇಳಿದರು.

ಭಾರತೀಯ ಸೇನಾ ಪಡೆಯ ಲೆಫ್ಟಿನೆಂಟ್ ಕರ್ನಲ್ ಕುಕ್ಲೂರು ಗ್ರಾಮದ ವಿವೇಕ್ ಸಾಯ ಮಾತನಾಡಿ, ಸೈನಿಕರು, ವೈದ್ಯರು ಮತ್ತು ಶಿಕ್ಷಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಇವರು ಜನತೆಗೆ ನೀಡುವ ಸೇವೆಗೆ ಬೆಲೆ ಕಟ್ಟಲಾಗು ವುದಿಲ್ಲ. ಹೀಗಾಗಿ ಇವರನ್ನು ಸಮಾ ಜದ ಜನತೆ ಸದಾ ಗೌರವಿಸು ತ್ತಿರಬೇಕೆಂದು ಹೇಳಿದರು. ಸೇನಾ ಕರ್ತವ್ಯದಲ್ಲಿ ಮಾನವೀಯ ಗುಣಗಳೂ ಮುಖ್ಯವಾಗುತ್ತದೆ ಎಂದು ಹೇಳಿದ ವಿವೇಕ್, ಭಾರತೀಯ ಸೇನೆಗೆ ಜಗತ್ತಿನಲ್ಲಿಯೇ ಅಪಾರವಾದ ಗೌರವ ಇದ್ದು, ಹೀಗಾಗಿ ಹೆಚ್ಚು ಯುವಕ-ಯುವತಿಯರು ಸೇನೆಗೆ ಸೇರ್ಪಡೆಯಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭ ಕುಂತಿ ಬೋಪಯ್ಯ, ಸೇನಾಧಿಕಾರಿ ವಿವೇಕ್, ಅನಿಲ್ ಎಚ್.ಟಿ. ಅವರನ್ನು ಕಳಂಚೇರಿ ಮಠದ ಪರವಾಗಿ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಸನ್ಮಾನಿಸಿದರು. ಕಾರ್ಯ ಕ್ರಮದಲ್ಲಿ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ, ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ. ವಿಶ್ವನಾಥ್ ಮಾತನಾಡಿ, ಕುಂತಿ ಟೀಚರ್ ಸಾಕ್ಷö್ಯ ಚಿತ್ರದ ಮೂಲಕ ಕುಂತಿ ಬೋಪಯ್ಯ ಅವರ ಸಾಧನೆಯನ್ನು ಸಮಾಜದ ಮಂದಿಡುವ ಕಾರ್ಯ ಸ್ತುತ್ಯಾರ್ಹ ಎಂದು ಶ್ಲಾಘಿಸಿದರು.

ಡಾ. ಎಸ್.ವಿ. ನರಸಿಂಹನ್ ಕಾರ್ಯಕ್ರಮ ನಿರೂಪಿಸಿ, ಮೈಥಿಲಿ ರಾವ್ ಪ್ರಾರ್ಥಿಸಿದರು.