ಸೋಮವಾರಪೇಟೆ,ಏ.೧೧: ಪಟ್ಟಣದ ಅಶೋಕ ರಸ್ತೆಯಲ್ಲಿ ಮನೆಗಳಿಲ್ಲದ ಕಡೆಯಲ್ಲಿ ರಸ್ತೆಗೆ ಚರಂಡಿ ನಿರ್ಮಾಣ ಮಾಡುವ ಮೂಲಕ ಪಟ್ಟಣ ಪಂಚಾಯಿತಿಯು ಹಣವನ್ನು ಪೋಲು ಮಾಡುತ್ತಿದೆ ಎಂದು ಸ್ಥಳೀಯರು ಆಕ್ಷೇಪಿಸಿದ್ದಾರೆ.
ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಚರಂಡಿ ಉತ್ತಮವಾಗಿತ್ತು. ಇದಕ್ಕೆ ಹೊಂದಿಕೊAಡAತೆ ಯಾವುದೇ ವಾಸದ ಮನೆಗಳೂ ಇಲ್ಲ. ಜನವಸತಿ ಇರುವ ಕಡೆ ಹೊಸ ಚರಂಡಿ ಮಾಡುವ ಬದಲು ಉತ್ತಮವಾಗಿರುವ ಕಡೆಯಲ್ಲಿ ನೂತನವಾಗಿ ಚರಂಡಿ ನಿರ್ಮಿಸಿರುವುದು ಸರಿಯಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ರಸ್ತೆಗಿಂತಲೂ ಎತ್ತರವಾಗಿ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಉತ್ತಮವಾಗಿದ್ದ ಚರಂಡಿಯನ್ನು ತೆಗೆದು ಮತ್ತೆ ಹೊಸದಾಗಿ ಚರಂಡಿ ನಿರ್ಮಾಣ ಮಾಡುವ ಮೂಲಕ ಸರ್ಕಾರದ ಹಣ ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿ ವಿಜೇತ ದೂರಿದ್ದಾರೆ.