ಮುಳ್ಳೂರು, ಏ. ೧೧: ಲೌಕಿಕ ಜಗತ್ತಿನಲ್ಲಿ ಪರಿಶ್ರಮದಿಂದ ಹಣ, ಆಸ್ತಿ ಸಂಪತ್ತು ಗಳಿಸಿದ ಮಾತ್ರ ನೆಮ್ಮದಿ ಜೀವನ ನಡೆಸಲು ಸಾಧ್ಯವಿಲ್ಲ. ಭಗವಂತನ ಸ್ಮರಣೆ ಅಧ್ಯಾತ್ಮಿಕ ಚಿಂತನೆಯಿAದ ನೆಮ್ಮದಿ ಕಾಣಬಹುದು ಎಂದರು.
ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಸಂಸ್ಥಾನ ಪೀಠಾಧೀಶ ಶ್ರೀ ಸುಜ್ಞಾನ ಶಿವತೀರ್ಥ ಸ್ವಾಮೀಜಿ ಹೇಳಿದರು. ಅಂಕನಹಳ್ಳಿ ಸಮೀಪದ ಮೆಣಸ ಗ್ರಾಮದಲ್ಲಿರುವ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಗುರುಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ವದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇಂದಿನ ಲೌಕಿಕ ಜೀವನದಲ್ಲಿ ಎಲ್ಲರೂ ಶ್ರಮಪಟ್ಟು ಕೆಲಸ ಮಾಡುವುದು ಹಣ ಸಂಪಾದಿಸಿ ಶ್ರೀಮಂತನಾಗಬೇಕೆAಬ ಗುರಿ ಇಟ್ಟುಕೊಂಡು ಬದುಕು ಸಾಗಿಸುತ್ತಾರೆ. ಆದರೆ ಇದರಿಂದ ನೆಮ್ಮದಿ ಕೆಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಭಗವಂತನಲ್ಲಿ ಸ್ಮರಣೆಯ ಚಿಂತನೆಯನ್ನು ಬೆಳೆಸಿಕೊಂಡರೆ ನೆಮ್ಮದಿಯೊಂದಿಗೆ ಶ್ರೀಮಂತ ಜೀವನ ನಡೆಸಬಹುದಾಗಿದೆ ಎಂದರು. ಪ್ರತಿಯೊಂದು ಧರ್ಮ ಪಂಥಗಳು ದೇವರಲ್ಲಿ ಭಕ್ತಿ ಸ್ಮರಣೆ ಬೆಳೆಸಿಕೊಳ್ಳಬೇಕೆಂದು ಹೇಳುತ್ತದೆ. ಈ ದಿಸೆಯಲ್ಲಿ ಎಲ್ಲರೂ ಅಧ್ಯಾತ್ಮಿಕ ಚಿಂತನೆ ಮತ್ತು ಗುರುಭಕ್ತಿ ಸ್ಮರಣೆ ಮೂಲಕ ತಮ್ಮಲ್ಲಿರುವ ಚಿಂತೆಗಳನ್ನು ದೂರ ಮಾಡಿಕೊಳ್ಳಬೇಕೆಂದರು.
ಮಠ ಮಂದಿರದಲ್ಲಿ ನೆಮ್ಮದಿ ಕಾಣುವ ಭಕ್ತರು ಇದರ ಜೊತೆಯಲ್ಲಿ ತಮ್ಮ ಮಕ್ಕಳ ನಡುವಳಿಕೆಯತ್ತ ಗಮನ ಹರಿಸಬೇಕು. ಮಕ್ಕಳು ಪಾಶ್ಚö್ಯಮಾತ್ಯ ಸಂಸ್ಕೃತಿಗೆ ಒಳಗಾಗಿ ಮೂಲ ಸಂಸ್ಕೃತಿ ಯನ್ನು ಮರೆಯದಂತೆ ಎಚ್ಚರವಹಿಸ ಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮನೆಹಳ್ಳಿ ಮಠಾದೀಶರಾದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಹಾಲಪ್ಪ, ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ವರಪ್ರಸಾದ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್. ಮಹೇಶ್ ಹಾಜರಿದ್ದರು.
ಶ್ರೀ ಕ್ಷೇತ್ರ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶನಿವಾರ ಶ್ರೀ ಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ಥ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ ನೆರವೇರಿತು. ಶ್ರೀ ಸ್ವಾಮಿಯವರ ಸಣ್ಣ ಚಂದ್ರಮAಡ ಲೋತ್ಸವ ಸೇವೆಯ ನಂತರ ಶ್ರೀ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ಪ್ರಸನ್ನ ತಪೋವನೇಶ್ವರಿ ಅಮ್ಮನವರ ಪ್ರೀತ್ಯರ್ಥ ಮುತ್ತೆöÊದೆ ಸೇವೆ ಹಾಗೂ ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯದೊಂದಿಗೆ ಜಾತ್ರೋತ್ಸವ ನಡೆಯಿತು.