ಕಣಿವೆ, ಏ. ೧೦: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಕುಶಾಲನಗರದ ಕಾವೇರಿ ನಿಸರ್ಗಧಾಮದ ತೂಗುಸೇತುವೆ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ. ಇದರಿಂದಾಗಿ ನಿಸರ್ಗಧಾಮದ ಒಳಗೆ ಪ್ರವೇಶಿಸಲಿರುವ ಪ್ರವಾಸಿಗರಿಗೆ ಇದು ಹೊಸತನದ ಆನಂದ ನೀಡಲಿದೆ. ಇನ್ನು ಕೆಲವೇ ದಿನಗಳಲ್ಲಿ ಪ್ರವಾಸಿಗರ ಸಂಚಾರಕ್ಕೆ ಈ ಸೇತುವೆ ಮುಕ್ತಗೊಳ್ಳ ಲಿದೆ. ಸುಳ್ಯದ ಹೆಸರಾಂತ ತೂಗುಸೇತುವೆಗಳ ನಿರ್ಮಾತೃ ಗಿರೀಶ್ ಭಾರದ್ವಜ್ ಅವರ ಮಾರ್ಗದರ್ಶನದಲ್ಲಿ ಈ ತೂಗುಸೇತುವೆ ನವೀಕೃತಗೊಂಡಿದೆ.