ಗೋಣಿಕೊಪ್ಪ ವರದಿ, ಏ. ೧೦: ಪೊನ್ನಂಪೇಟೆ ತಾಲೂಕಿನ ಕಿರುನಾಲ್ಕು ನಾಡ್ ಮತ್ತೂರು ಭೂತನಾಥ ಅಯ್ಯಪ್ಪ ದೇವರ ವಾರ್ಷಿಕೋತ್ಸವ ನಡೆಯಿತು. ಮಂಗಳವಾರ ದೇವರ ಕೊಡಿಮರ ನಿಲ್ಲಿಸುವ ಆಚರಣೆಯೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಯಿತು. ಬೊಳಕ್, ಗಣಪತಿ ಪೂಜೆ, ಸತ್ಯನಾರಾಯಣ ಪೂಜೆ, ರುದ್ರಾಭಿಷೇಕ, ನಾಥನಿಗೆ ಅಪ್ಪ ಅರ್ಪಣೆ, ಗಣಪತಿಗೆ ಪಂಚಕಜ್ಜಾಯ, ಅಲಂಕಾರ ಪೂಜಾ ಕಾರ್ಯ ನೆರವೇರಿತು. ಶನಿವಾರ ಮಧ್ಯಾಹ್ನ ವಿಶೇಷ ಪೂಜೆ, ತಡುಂಬು ಹೊರಬರುವ ಮೂಲಕ ಪ್ರದಕ್ಷಿಣೆ, ಅವಭೃತ ಸ್ನಾನ, ವಸಂತಪೂಜೆ ನಡೆಯಿತು.