ಚೆಯ್ಯಂಡಾಣೆ, ಏ. ೯: ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ವೀರಾಜಪೇಟೆ ನಾಪೋಕ್ಲು ಮುಖ್ಯ ರಸ್ತೆಯ ಕರಡ ಹೊಳೆ ನೀರಿಲ್ಲದೆ ಬರಡಾಗಿದೆ.
ಕಡಂಗ ಪಟ್ಟಣ, ಅರಪಟ್ಟು, ಅರಪಟ್ಟು ಪೈಸಾರಿ, ಕರಡ ಗ್ರಾಮಕ್ಕೆ ಕುಡಿಯಲು ಈ ಹೊಳೆಯಿಂದ ನೀರು ಸರಬರಾಜಾಗುತ್ತಿದ್ದು, ಬೇಸಿಗೆ ಹಿನ್ನೆಲೆ ಹೊಳೆಯಲ್ಲಿ ನೀರು ಕ್ಷೀಣಿಸಿದ ಕಾರಣ ಗ್ರಾಮಕ್ಕೆ ನೀರು ಇಲ್ಲದ ಪರಿಸ್ಥಿತಿ ಉಂಟಾಗಿದೆ.
ಹೊಳೆಯಲ್ಲಿ ಸ್ವಲ್ಪ ನೀರು ಶೇಖರಣೆ ಆದರೆ ಮಾತ್ರ ೨ ದಿನಕೊಮ್ಮೆ ನೀರು ಪೂರೈಕೆಯಾಗುತ್ತಿದೆ. -ಅಶ್ರಫ್