ಶನಿವಾರಸಂತೆ, ಏ. ೯: ಪಟ್ಟಣದ ಕಾವೇರಿ ರಸ್ತೆ ಬದಿಯಲ್ಲಿ ಮಕ್ಕಳ ಕಟ್ಟೆ ಕೆರೆ ಬಳಿ ವಾರದ ಹಿಂದೆ ಪುಟ್ಟ ಕರುವೊಂದು ನರಳುತ್ತಾ ಮಲಗಿತ್ತು. ದಾರಿಯಲ್ಲಿ ತಿರುಗಾಡುತ್ತಿದ್ದ ಮಂದಿ ಅಯ್ಯೋ ಎಂಬ ಉದ್ಗಾರ ವ್ಯಕ್ತಪಡಿಸಿ ಬಳಿ ನಿಂತು ಮೇಲಕ್ಕೆಬ್ಬಿಸಲು ಪ್ರಯತ್ನಿಸಿ ವಿಫಲರಾಗಿ ಮುಂದೆ ಸಾಗುತ್ತಿದ್ದರು. ಮಾನವೀಯತೆಯ ದೃಷ್ಟಿಯಿಂದ ಆ ಕರುವಿಗೆ ಕುಡಿಯಲು ನೀರು, ಶನಿವಾರಸಂತೆ, ಏ. ೯: ಪಟ್ಟಣದ ಕಾವೇರಿ ರಸ್ತೆ ಬದಿಯಲ್ಲಿ ಮಕ್ಕಳ ಕಟ್ಟೆ ಕೆರೆ ಬಳಿ ವಾರದ ಹಿಂದೆ ಪುಟ್ಟ ಕರುವೊಂದು ನರಳುತ್ತಾ ಮಲಗಿತ್ತು. ದಾರಿಯಲ್ಲಿ ತಿರುಗಾಡುತ್ತಿದ್ದ ಮಂದಿ ಅಯ್ಯೋ ಎಂಬ ಉದ್ಗಾರ ವ್ಯಕ್ತಪಡಿಸಿ ಬಳಿ ನಿಂತು ಮೇಲಕ್ಕೆಬ್ಬಿಸಲು ಪ್ರಯತ್ನಿಸಿ ವಿಫಲರಾಗಿ ಮುಂದೆ ಸಾಗುತ್ತಿದ್ದರು. ಮಾನವೀಯತೆಯ ದೃಷ್ಟಿಯಿಂದ ಆ ಕರುವಿಗೆ ಕುಡಿಯಲು ನೀರು, ಮಲಗಿಸಿದರು. ಅಲ್ಲಿಯೂ ಮಹಿಳೆಯರಿಂದ ಆಹಾರ, ನೀರು, ಗಂಜಿಯ ಉಪಚಾರ ನಡೆದಿದೆ. ಮೂವರು ಯುವಕರು ನಿತ್ಯವೂ ಬಾಳೆಹಣ್ಣು, ಆಹಾರವನ್ನು ತಂದು ನೀಡುತ್ತಿದ್ದು ಮಾನವೀಯತೆ ಮೆರೆದಿದ್ದಾರೆ. ಪಶು ಚಿಕಿತ್ಸಾಲಯದ ಮೇಲ್ವಿಚಾರಕರು ಬಂದು ಕರುವನ್ನು ಪರೀಕ್ಷಿಸಿ ಚುಚ್ಚುಮದ್ದು, ಔಷಧಿ ನೀಡಿದ್ದಾರೆ.
ಇಷ್ಟೆಲ್ಲಾ ಘಟನೆ ನಡೆದು ವಾರವಾದರೂ ಕರುವಿನ ವಾರಸುದಾರರು ಹುಡುಕಿ ಬರಲಿಲ್ಲ. ಬಹುಶಃ ಗಂಡು ಕರುವಾಗಿ ರುವುದರಿಂದ ನಿರ್ಲಕ್ಷಿಸಿರಬಹುದು.
ಯಾವ ಗೋಶಾಲೆಯ ವರಾದರೂ ಈ ಅನಾಥ ಕರುವಿಗೆ ಆಶ್ರಯ ನೀಡುವರೇ? ಚಿಕಿತ್ಸೆ ನೀಡಿ ಗುಣಪಡಿಸುವರೇ? ಎಂಬ ಪ್ರಶ್ನೆ ಕರುವನ್ನು ಮಾನವೀಯ ದೃಷ್ಟಿಯಿಂದ ಉಪಚರಿಸುತ್ತಿರುವವರ ಮನದಲ್ಲಿ ಮೂಡಿದೆ.
- ಶ.ಗ. ನಯನತಾರಾ