ಗೋಣಿಕೊಪ್ಪ ವರದಿ, ಏ. ೧೦ : ಅರಮೇರಿ ಗ್ರಾಮದ ಪನ್ನಂಗಾಲತಮ್ಮೆ ದೇವರ ಉತ್ಸವ ತಾ. ೧೨ ಮತ್ತು ೧೩ ರಂದು ಜರುಗಲಿದೆ.
ತಾ. ೧೨ ರಂದು ಮುಂಜಾನೆ ದೇವತಕ್ಕ ಬಾಚೀರ ಕುಟುಂಬದ ಐನ್‌ಮನೆಯಿಂದ ಭಂಡಾರ ಇಳಿಸುವ ಶಾಸ್ತç ನಡೆಯುತ್ತದೆ. ನಂತರ ಗರ್ಭಗುಡಿ ಶುದ್ಧ ಮಾಡುವುದು, ಅರ್ಚಕರಿಂದ ಪ್ರಭಾವಳಿ ಅಲಂಕಾರ, ಅಕ್ಕಿಯೊಂದಿಗೆ ದೇವಸ್ಥಾನಕ್ಕೆ ಒಪ್ಪಿಸಲಾಗುತ್ತದೆ. ಬೆಳಿಗ್ಗೆ ೧೧ ಗಂಟೆಗೆ ದೇವರು ಹೊರ ಬರುವುದು. ಕಣಿಯ ಜನಾಂಗದ ಚೆರಿಯಕಂಡ ಕುಟುಂಬದಿAದ ಕೊಡೆ ಒಪ್ಪಿಸುವ ಆಚರಣೆ, ಭಂಡಾರ ತಕ್ಕ ಬಲ್ಟಿಕಾಳಂಡ ಮತ್ತು ದೇವತಕ್ಕ ಬಾಚೀರ ಕುಟುಂಬ ಎತ್ತ್ ಪೋರಾಟ, ಹರಕೆ ಎತ್ತ್ ಪೋರಾಟ ನಡೆಯುತ್ತದೆ. ಈ ಸಂದರ್ಭ ಹರಕೆ ಹೊತ್ತವರು ದೇವರಿಗೆ ಮಗುವಿನೊಂದಿಗೆ ತೊಟ್ಟ್ಕುಂಞÂ ಹರಕೆ ತೀರಿಸುತ್ತಾರೆ. ರಾತ್ರಿ ವಿಶೇಷ ಪೂಜೆ ನಡೆಯುತ್ತದೆ. ತಾ. ೧೩ ರಂದು ಚಾವುಂಡಿ ದೇವರಿಗೆ ಪ್ರಸಾದ ಅರ್ಪಣೆ, ಕುರ್‌ಂಜ ಕಳಿ, ತೆಂಗಿನಕಾಯಿಗೆ ಗುಂಡು ಹೊಡೆಯುವ ತೆಂಗೆ ಪೋರ್, ಸಂಜೆ ದೇವರ ಸ್ನಾನ ಆಚರಣೆ ನಡೆಯಲಿದೆ. ಕಳೆದ ವರ್ಷ ಗಾಳಿಗೆ ಮರ ಬಿದ್ದು ದೇವಸ್ಥಾನ ಸಂಪೂರ್ಣವಾಗಿ ಕುಸಿದ ಹಿನ್ನೆಲೆ, ಪ್ರಸ್ತುತ ಸುಮಾರು ೧೬ ಲಕ್ಷ ರೂ. ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಿ ಪ್ರತಿಷ್ಠಾಪನೆ ಮಾಡಲಾಗಿದ್ದು, ವಾರ್ಷಿಕೋತ್ಸವ ನಡೆಸಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.