*ಗೋಣಿಕೊಪ್ಪಲು, ಏ. ೧೦: ಪೊನ್ನಂಪೇಟೆ ಸಮೀಪದ ತೂಚಮಕೇರಿಯ ಕೊಮ್ಮಾಡು ಶ್ರೀ ಮಾರಮ್ಮ ದೇವರ ವಾರ್ಷಿಕ ಉತ್ಸವವು ತಾ.೧೧ರಿಂದ (ಇಂದಿನಿAದ) ಆರಂಭಗೊಳ್ಳಲಿದೆ. ತಾ. ೧೪ರ ವರೆಗೆ ಜರುಗಲಿರುವ ಶ್ರೀ ಮಾರಮ್ಮ ದೇವರ ಉತ್ಸವದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿದೆ ಎಂದು ಕೊಮ್ಮಾಡು ಶ್ರೀ ಮಾರಮ್ಮ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ವಿ.ಆರ್. ಹರೀಶ್ ಪಿಳ್ಳೆ ತಿಳಿಸಿದ್ದಾರೆ.