ಗೋಣಿಕೊಪ್ಪ, ಏ. ೧೦: ಕಾವೇರಿ ಕಾಲೇಜಿನಲ್ಲಿ ೧೯೭೮ ರಿಂದ ೧೯೮೧ ರ ಸಾಲಿನ ಅವಧಿ ಯಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡಿದ ಹಳೇ ವಿದ್ಯಾರ್ಥಿ ಗಳ ಕೂಟದ ೩ನೇ ವರ್ಷದ ಸಮ್ಮಿಲನ ಕಾರ್ಯಕ್ರಮ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಲೆಕ್ಕಶಾಸ್ತçದ ಪ್ರಾಧ್ಯಾಪಕ ಪ್ರೊ. ಟಿ. ವೆಂಕಟರಾಮಯ್ಯ ಅವರ ಪತ್ನಿ ಸೂರ್ಯಕುಮಾರಿ ಮತ್ತು ಭೂಗೋಳ ಶಾಸ್ತçದ ಪ್ರಾಧ್ಯಾಪಕ ಡಾ. ವಿ.ಎನ್. ನಾಯಕ್ ಅವರುಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ಪ್ರೊ. ವೆಂಕಟರಾಮಯ್ಯ ಮಾತನಾಡಿ, ಕೊಡಗಿನಲ್ಲಿ ಕಾವೇರಿ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ ಸಂದರ್ಭದಲ್ಲಿ ಕೊಡಗಿನ ಜನತೆ ನನಗೆ ಗೌರವ ದೊಂದಿಗೆ ಎಲ್ಲ ಸವಲತ್ತುಗಳನ್ನು ನೀಡಿ ಪ್ರೀತಿಯಿಂದ ನೋಡಿ ಕೊಂಡಿದೆ. ಆ ಅವಧಿಯಲ್ಲಿ ಉತ್ತಮ ವಿದ್ಯಾರ್ಥಿ ವೃಂದ, ಉತ್ತಮ ಆಡಳಿತ ಮಂಡಳಿಯ ಸಹಕಾರದಿಂದ ನಿಮ್ಮಂಥ ಉತ್ತಮ ವಿದ್ಯಾರ್ಥಿಗಳನ್ನು ಸೃಷ್ಠಿಸಲು ಸಾಧ್ಯವಾಯಿತು.

ವಿದ್ಯಾಭ್ಯಾಸದ ಸದುಪಯೋಗವೇ ದೇಶದ ಪ್ರಗತಿ. ಎಲ್ಲರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂದು ಹೇಳಿದರು. ಡಾ. ವಿ.ಎನ್. ನಾಯಕ್ ಮಾತನಾಡಿ, ನಾನು ಕೊಡಗಿನಲ್ಲಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಕೊಡಗಿನ ಪ್ರಕೃತಿಗೆ ಮಾರುಹೋಗಿ ಕೊಡಗಿನ ಕಾಫಿ ಕೃಷಿಯ ಬಗ್ಗೆ ಅಧ್ಯಯನ ಮಾಡಿ ನನಗೆ ಡಾಕ್ಟರೇಟ್ ಪದವಿಯನ್ನು ಪಡೆಯಲು ಸಾಧ್ಯವಾಯಿತು. ಕೊಡಗಿನ ವಿದ್ಯಾರ್ಥಿಗಳು ಸೈನಿಕರಂತೆ ಶಿಸ್ತಿನವರು ಗುರುಗಳಿಗೆ ಅಪಾರ ಗೌರವ ನೀಡುತ್ತಾರೆ. ಅದಕ್ಕೆ ಈ ದಿನ ತಾವು ನಮ್ಮನ್ನು ಆಹ್ವಾನಿಸಿ ಸನ್ಮಾನಿಸಿ ಗೌರವಿಸುತ್ತಿರುವುದೇ ಸಾಕ್ಷಿ.. ಹೀಗೆಯೇ ಗುರು-ಶಿಷ್ಯರ ಸಂಬAಧ ಮುಂದುವರಿಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಹಪಾಠಿಗಳಾದ ನಂದಿನೆರವAಡ ದಿನೇಶ್, ಚೆಪ್ಪುಡಿರ ಕಿರಣ್ ಕುಟ್ಟಪ್ಪ, ಕೇರಳದಿಂದ ಆಗಮಿಸಿದ ಮಾಜಿ ಸೈನಿಕ ವಿಜಯನ್, ಕಾಫಿ ಬೆಳೆಗಾರ ಗಾಂಧಿರಾವ್, ತಾತಂಡ ದಿಲೀಪ್, ಮೈಸೂರಿನ ಇಂದಿರ, ಮಾಯ, ಜಾಲಿ ಪೌಲ್, ಆದೇಂಗಡ ಸುಮಿತ್ರ, ಕುಪ್ಪಂಡ ಶ್ವೇತಾ ಗಣೇಶ ಅವರುಗಳನ್ನು ವಿವಿಧ ಕ್ಷೇತ್ರದ ಸಾಧನೆ - ಸಮಾಜ ಸೇವೆ ಹಾಗೂ ಕೂಟದ ಬೆಳವಣಿಗೆಗೆ ಸಹಕರಿಸಿದ ನಿಟ್ಟಿನಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ೫೦ ಹಳೆ ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬ ಪಾಲ್ಗೊಂಡಿತ್ತು. ೩ನೇ ಸಮ್ಮಿಲನದ ಪೂರ್ಣ ವ್ಯವಸ್ಥೆಯ ಜವಾಬ್ದಾರಿಯನ್ನು ಬಾಚಮಡ ವಸಂತ ಮತ್ತು ರೀಟ ವಸಂತ್ ಹಾಗೂ ಯೋಗಿನಿ ವಹಿಸಿ ಕೊಂಡಿದ್ದರು. ಟಿ.ಎಲ್. ಪದ್ಮಜ ಪ್ರಾರ್ಥಿಸಿ, ಜಯಲಕ್ಷಿö್ಮ ಸ್ವಾಗತಿಸಿ, ನಿರೂಪಿಸಿದರು. ಚೋಳಂಡ ಚಂಗಪ್ಪ ವಂದಿಸಿದರು.