ಸೋಮವಾರಪೇಟೆ, ಏ. ೧೦: ಇಲ್ಲಿನ ವಾಕರ್ಸ್ ವಿಂಗ್‌ನ ೧೯ನೇ ವಾರ್ಷಿಕೋತ್ಸವ ಮತ್ತು ಮಹಾಸಭೆ ಸಕಲೇಶಪುರದ ಖಾಸಗಿ ಹೋಮ್‌ಸ್ಟೇ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ. ರವಿ, ಕುರುಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಿ.ಸಿ. ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಡಿ. ವಿಜೇತ್ ಹಾಗೂ ಇನ್ನರ್‌ವೀಲ್ ಸಂಸ್ಥೆಯ ಅಧ್ಯಕ್ಷೆ ಪ್ರೇಮಾ ಹೃಷಿಕೇಶ್ ಹಾಗೂ ಸಮಾಜ ಸೇವಕಿ ಲತಾ ನಾಗೇಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ನೂತನ ಸಾಲಿನ ಆಡಳಿತ ಮಂಡಳಿ ರಚಿಸಿದ್ದು, ಅಧ್ಯಕ್ಷರಾಗಿ ಮೋಹನ್ ನಿಶಾಂತ್, ಕಾರ್ಯದರ್ಶಿಯಾಗಿ ಪಿ. ನಾಗೇಶ್, ಖಜಾಂಚಿಯಾಗಿ ನವೀನ್ ಧರ್ಮಪ್ಪ ಆಯ್ಕೆಯಾದರು. ನೂತನ ಆಡಳಿತ ಮಂಡಳಿಗೆ ಡಿ.ವಿ. ಉದಯ ರವಿ ಅವರು ಅಧಿಕಾರ ಹಸ್ತಾಂತರ ಮಾಡಿದರು.