ಸಿದ್ದಾಪುರ ಏ. ೯: ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಪಾಲಿಬೆಟ್ಟ ನಿವಾಸಿ ಹರೀಶ್ ಎಂಬಾತ ಕೇರಳ ಲಾಟರಿಯನ್ನು ಮಾರಾಟ ಮಾಡುತ್ತಿರುವ ಸಂದÀರ್ಭದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿದ್ದಾಪುರ ಪೊಲೀಸರು ಲಾಟರಿ ಹಾಗೂ ರೂ. ೧೭೦೦ ವಶಪಡಿಸಿಕೊಂಡಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.