ಮೂರ್ನಾಡು, ಏ. ೧೦: ಇಲ್ಲಿನ ಕಾಂತೂರು ಗ್ರಾಮದ ಪನ್ನಂಗಾಲ ತಾಯಿ ದೇವಸ್ಥಾನದ ವಾರ್ಷಿಕೋತ್ಸವ ತಾ. ೧೩ ಮತ್ತು ೧೪ ರಂದು ನಡೆಯಲಿದೆ.
ತಾ. ೧೩ರಂದು ದೇವರ ಶುದ್ಧ ಕಳಸ, ಕೆರೆಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಮತ್ತು ರಾತ್ರಿ ೭ ಗಂಟೆಗೆ ಕುರುಂದ ಬಾರಣಿ ಇರುತ್ತದೆ. ತಾ. ೧೪ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಚಾಮುಂಡಿ ಉತ್ಸವ, ಕುರುಂದಾಟ ಮತ್ತು ದೇವರ ಜಳಕ ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷರು ಮತ್ತು ತಕ್ಕ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.