ಸುಂಟಿಕೊಪ್ಪ, ಏ. ೧೦: ಹರದೂರು ಗ್ರಾಮದ ಶ್ರೀ ಆದಿನಾಗಬಹ್ಮ ಮೊಗೇರ್ಕಳ ಸೇವಾ ಸಮಿತಿ ವತಿಯಿಂದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಗಳ ಕೊರಗ ತನಿಯ ದೈವದ ೮೩ನೇ ನೇಮೋತ್ಸವವು ತಾ. ೧೫ ಮತ್ತು ೧೬ ರಂದು ನಡೆಯಲಿದೆ. ತಾ. ೧೫ ರಂದು ಮಧ್ಯಾಹ್ನ ೧೨ ಗಂಟೆಗೆ ಆಯುಧಾ ಪೂಜೆ, ಸಂಜೆ ೬ ಗಂಟೆಗೆ ಮಂತ್ರವಾದಿ ಗುಳಿಗನ ನೇಮ, ೮.೩೦ ಗಂಟೆಗೆ ಶ್ರೀ ಆದಿನಾಗಬ್ರಹ್ಮ ಮೊಗೇರ ದೈವಗಳ ಗರಡಿ ಇಳಿಯುವುದು. ೧೨.೩೦ ಗಂಟೆಗೆ ಆದಿ ಮಾಯೆ ತನ್ನಿ ಮಾನಿಗ ಗರಡಿ ಇಳಿಯುವುದು. ತಾ. ೧೬ ರಂದು ಬೆಳಿಗ್ಗೆ ೮ ಗಂಟೆಗೆ ಶ್ರೀ ಕೊರಗ ದೈವದ ನೇಮ ನಡೆಯಲಿದೆ ಎಂದು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಸಮಿತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.