ಮಡಿಕೇರಿ, ಏ. ೮: ಹೊದ್ದೂರು ಗ್ರಾಮದ ಭಗವತಿ, ಮಹಾದೇಶ್ವರ, ಭದ್ರಕಾಳಿ, ವಿಷ್ಣುಮೂರ್ತಿ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಒಂದು ವಾರಗಳ ಕಾಲ ಗ್ರಾಮ ದೇವತೆ ಭಗವತಿ ಸನ್ನಿಧಾನದಲ್ಲಿ ಅಂದಿಬೊಳಕ್ ಕೊಟ್ಟುವುದು, ಅಲಂಕಾರ ಪೂಜೆ ನಡೆದು, ಬೋಡ್ ಕಳಿ, ಭದ್ರಕಾಳಿ ಎತ್ತೊಳಮ್ಮೆಯ ಮುಡಿ ತೆರೆಗಳು, ಕೊಟ್ಟಿಪಾಡ್‌ವೊ, ತೋಯತ ತೆರೆ, ಮೇಲೇರಿಗೆ ಅಗ್ನಿ ಸ್ಪರ್ಶ ನಡೆದ ಬಳಿಕ ದೈವಗಳ ತೆರೆಗಳು ನಡೆದವು. ಶ್ರೀ ಕಲ್ಯಾಟಜಪ್ಪನ ಕೋಲ, ಶ್ರೀ ವಿಷ್ಣು ಮೂರ್ತಿ ದೇವರ ಅಗ್ನಿಪ್ರವೇಶ ನಡೆಯಿತು. ನಾಡ ತಕ್ಕರಾದ ನೆರವಂಡ ಸಂಜಯ್ ಪೂಣಚ್ಚ ಸೇರಿದಂತೆ ಭಕ್ತರು ಭಾಗವಹಿಸಿದ್ದರು.