ಕೂಡಿಗೆ, ಏ. ೮: ಕಳೆದ ಒಂದು ತಿಂಗÀಳಿನಿAದ ಕೂಡಿಗೆ ಕಾವೇರಿ -ಹಾರಂಗಿ ನದಿಗಳ ಸಂಗಮ ಸ್ಥಳದಿಂದ ಕೂಡಿಗೆ ಸರ್ಕಲ್ ಬಳಿಯ ಹಾರಂಗಿ ಸೇತುವೆ ಮೇಲ್ಭಾಗದ ಮೂಲಕ ಬರುವ ಮಂಗಗಳು ಬೇಕರಿ, ಅಂಗಡಿ ಮತ್ತು ಈ ವ್ಯಾಪ್ತಿಯ ಮನೆಗಳಿಗೆ ನುಗ್ಗಿ ಮನಬಂದAತೆ ರಂಪಾಟ ಮಾಡುವುದರ ಜೊತೆಗೆ ಹಾಸನ, ಸೋಮವಾರಪೇಟೆ ಕಡೆಗೆ ಹೋಗಲು ಕೂಡಿಗೆ ಸರ್ಕಲ್ ಬಳಿಯಲ್ಲಿ ಬಸ್ಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಅನೇಕ ಬಾರಿ ಕಚ್ಚಿರುವುದರ ಜೊತೆಯಲ್ಲಿ ಅವರ ಬ್ಯಾಗ್ಗಳನ್ನು ಚೆಲ್ಲಾಪಿಲ್ಲಿ ಮಾಡಿದ ಘಟನೆಗಳು ನಡೆದಿವೆ.
ಇಂದು ಬೆಳಗಿನ ಜಾವ ೭ ಗಂಟೆಯ ಸಮಯದಲ್ಲಿ ಕೂಡಿಗೆಯ ಮಸೀದಿ ಮುಂಭಾಗದ ಮನೆಯ ಒಳಗೆ ಪ್ರವೇಶ ಮಾಡಿದ ಮಂಗ ೭೪ ವರ್ಷದ ವಯೊವೃದ್ಧೆ ಯಸಿಮಾ ಎಂಬವರ ಎಡ ಕೈಯನ್ನು ಕಚ್ಚಿದ ಪರಿಣಾಮವಾಗಿ ಅವರ ಕೈಗೆ ಪಟ್ಟಾಗಿ ರಕ್ತ ಸ್ರಾವವಾಗಿದೆ. ಅವರಿಗೆ ಕುಶಾಲನಗರ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಹಳೆ ಕೂಡಿಗೆ ವ್ಯಾಪ್ತಿಯ ಕೆಲವು ಮನೆಗಳಿಗೂ ಸಹ ನುಗ್ಗಿದ ಮಂಗಣ್ಣಗಳು ದಾಳಿ ಮಾಡಿವೆ.
ಸಂಗಮ ಸ್ಧಳದಿಂದ ಬರುವ ಮಂಗಗಳು ಕೂಡಿಗೆ ಸರ್ಕಲ್ ವಿವಿಧ ಅಂಗಡಿಗಳಿಗೆ ನುಗ್ಗುವುದರ ಜೊತೆಯಲ್ಲಿ ಮನೆಗಳ ಬಾಗಿಲು ತೆರೆದರೆ ಸಾಕು ಒಳಗೆ ನುಗ್ಗುವ ಪ್ರಸಂಗ ಎದುರಾಗುತ್ತಿದೆ. ಇದರಿಂದಾಗಿ ಚಿಕ್ಕ ಮಕ್ಕಳು ಮನೆಯಿಂದ ಹೊರಗಡೆ ಬರುವುದೇ ಕಷ್ಟವಾಗಿದೆ. ಇದುವರೆಗೂ ಹತ್ತಾರು ಮಂದಿ ಪ್ರಯಾಣಿಕರಿಗೆ ಕಚ್ಚಿದ ಘಟನೆಗಳು ನಡೆದಿವೆ. ಸರ್ಕಲ್ ಸಮೀಪದ ಶಾಲೆಗಳಿಗೂ ನುಗ್ಗಿ ದಾಂಧಲೆ ನಡೆಸಿವೆ.
ಸಾರ್ವಜನಿಕ ದೂರಿನ ಮೇರೆಗೆ ಅರಣ್ಯ ಇಲಾಖೆ ವತಿಯಿಂದ ಎರಡೂ ಕಡೆಗಳಲ್ಲಿ ಬೋನ್ ಅಳವಡಿಕೆ ಮಾಡಲಾಗಿತ್ತು. ಆದರೆ ಮಂಗಣ್ಣಗಳು ಸೆರೆಸಿಕ್ಕಿಲ್ಲ. ಕೆಲವು ಮನೆಗಳ ಹತ್ತಿರ ಬಲೆ ಬೀಸಿ ಎರಡು ಮಂಗಗಳನ್ನು ಹಿಡಿಯಲಾಗಿತ್ತು. ಆದರೆ ದಿನಂಪ್ರತಿ ಸಂಗಮದ ಕಡೆಯಿಂದ ಬರುವ ಮಂಗಗಳಿಗೆ ತಿನ್ನುವ ವಸ್ತುಗಳನ್ನು ನೀಡಿದರೂ ಸಹ ಸಾರ್ವಜನಿಕರನ್ನು ಕಚ್ಚುತ್ತಿರುವುರಿಂದಾಗಿ ತೊಂದರೆ ಅನುಭವಿಸುವಂತಾಗಿದೆ.
ಸAಬAಧಿಸಿದ ಅರಣ್ಯ ಇಲಾಖೆಯವರು ಕೂಡಿಗೆ ಸರ್ಕಲ್ ವ್ಯಾಪ್ತಿಯಲ್ಲಿ ಆಗುತ್ತಿರುವ ತೊಂದರೆಗಳ ಸಂಪೂರ್ಣವಾದ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಮಂಗಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು ಮುಂದಾಗಬೇಕೆAದು ಈ ವ್ಯಾಪ್ತಿಯ ಸಾರ್ವಜನಿಕರ ಮತ್ತು ಗ್ರಾಮಸ್ಥರ ಅಗ್ರಹವಾಗಿದೆ.
ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಚೇತನ್, ಕಣಿವೆ ಉಪ ವಲಯ ಅರಣ್ಯ ಅಧಿಕಾರಿ ಭರತ್ ಸೇರಿದಂತೆ ಸಿಬ್ಬಂದಿ ವರ್ಗದವರು ಆಸ್ಪತ್ರೆಗೆ ಭೇಟಿ ನೀಡಿ ಮಂಗ ಕಚ್ಚಿದ ವ್ಯಕ್ತಿಯ ಆರೋಗ್ಯವನ್ನು ವಿಚಾರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬೋನ್ ಅಳವಡಿಸಿ ಮಂಗಗಳನ್ನು ಹಿಡಿಯಲು ಪ್ರಯತ್ನ ಮಾಡಲಾಗುವುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. -ಕೆ.ಕೆ. ನಾಗರಾಜಶೆಟ್ಟಿ