ಭಾಗಮಂಡಲ, ಏ. ೮ : ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿದ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಕುದುಕುಳಿ ಐನ್ಮನೆ ಕ್ರಿಕೆಟ್ ಕಪ್ ೨೦೨೩ರಲ್ಲಿ ಕಾವೇರಿ ಮನೆ ಮತ್ತು ಕುದುಪಜೆ ತಂಡಗಳ ನಡುವೆ ಮೊದಲ ಪಂದ್ಯಾಟದಲ್ಲಿ ಕಾವೇರಿಮನೆ ತಂಡ ೩೬ ರನ್ ಗಳಿಸಿದರೆ ಕುದುಪಜೆ ತಂಡ ಗುರಿ ಪೂರ್ಣಗೊಳಿಸಿ ೧೦ ವಿಕೆಟ್ಗಳ ಗೆಲುವು ಸಾಧಿಸಿತು. ಕನ್ನಡ್ಕ ಮತ್ತು ಕುದುಪಜೆ ತಂಡಗಳು ಸೆಣೆಸಾಟ ನಡೆಸಿದವು. ಕನ್ನಡ್ಕ ೬೭ ರನ್ ಗಳಿಸಿದರೆ ಕುದುಪಜೆ ತಂಡ ಒಂಬತ್ತು ವಿಕೆಟ್ಗಳ ಗೆಲುವು ಸಾಧಿಸಿತು. ತಳೂರು ಮತ್ತು ಬೈಮನ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಳೂರು ತಂಡ ೬೧ ರನ್ ಗಳಿಸಿತು. ಬೈಮನ ತಂಡ ೪೩ ರನ್ ಗಳಿಸಿ ೧೮ ರನ್ಗಳ ಸೋಲನ್ನು ಅನುಭವಿಸಿತು.
ತಳೂರು ಮತ್ತು ಬಳ್ಳಡ್ಕ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತಳೂರು ತಂಡ ೬೩ ರನ್ ಗಳಿಸಿದರೆ ಬಳ್ಳಡ್ಕ ತಂಡ ೨೪ ರನ್ ಗಳಿಸಿ ೩೧ ರನ್ಗಳ ಸೋಲನ್ನು ಅನುಭವಿಸಿತು. ಕುದುಪಚೆ ಮತ್ತು ತಳೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುದುಪಜೆ ತಂಡ ೭೧ ರನ್ ಗಳಿಸಿತು. ತಳೂರು ತಂಡ ೩೮ ರನ್ ಗಳಿಸಿ ೩೩ ರನ್ಗಳ ಸೋಲನ್ನು ಅನುಭವಿಸಿತು. ಕುದುಪಜೆ ತಂಡ ಮುಂದಿನ ಹಂತಕ್ಕೆ ಪ್ರವೇಶಿಸಿತು.
-ಸುನಿಲ್