ನಾಪೋಕ್ಲು, ಏ. ೭: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ನಡೆಸಲಾಯಿತು.
ಪಾಡಿ ಶ್ರೀ ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ದೇವಳಕ್ಕೆ ಸಂಬAಧಿಸಿದ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ನಿರ್ದೇಶಕರಾದ ಪಾಂಡAಡ ನರೇಶ್, ಕಲಿಯಂಡ ಹ್ಯಾರಿ ಮಂದಣ್ಣ, ಕೋಡಿಮಣಿಯಂಡ ಸುರೇಶ್, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ, ಪರದಂಡ ವಿಠಲ,
(ಮೊದಲ ಪುಟದಿಂದ) ದೇವಳದ ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಭಕ್ತಾದಿಗಳು ಪಾಲ್ಗೊಂಡಿದ್ದರು.
ಗಿರೀಶ್ ಕಲ್ಲೂರಾಯ ಅವರ ನೇತೃತ್ವದಲ್ಲಿ ನಡೆದ ದೈವಿಕ ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಕುಶ ಭಟ್, ಶ್ರೀನಿವಾಸ್ ಹೆಬ್ಬಾರ್, ಶ್ರೀಕಾಂತ್ ಹೆಬ್ಬಾರ್, ರವಿ ಕಲ್ಲೂರಾಯ ಕಾರ್ಯನಿರ್ವಹಿಸಿದರು.