ಸುಂಟಿಕೊಪ್ಪ, ಏ. ೮: ಮನೆಯ ಮುಂಭಾಗ ನಿಲ್ಲಿಸಿದ್ದ ೨ ಕಾರುಗಳ ಮೇಲೆೆ ನಸುಕಿನ ವೇಳೆಯಲ್ಲಿ ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ.

ರಾಷ್ಟಿçÃಯ ಹೆದ್ದಾರಿಯ ಆನೆಕಾಡು ಬಳಿಯ ಮೆಟ್ನಹಳ್ಳ ಬಳಿ ಸಾನಿಪು ಅವರ ಸ್ವಿಫ್ಟ್ ಹಾಗೂ ಶೇಖರ್ ಎಂಬವರಿಗೆ ಸೇರಿದ ಸ್ಯಾಂಟ್ರೋ ಕಾರುಗಳನ್ನು ನಿಲ್ಲಿಸಲಾಗಿತ್ತು. ಶನಿವಾರ ಬೆಳಗ್ಗಿನ ಜಾವ ೪.೩೦ ರ ಸಂದರ್ಭ ಕಾಡಾನೆ ಸ್ಯಾಂಟ್ರೋ ಕಾರಿನ ಮೇಲೆ ದಾಳಿ ನಡೆಸಿತ್ತು. ನಂತರ ಸಾನಿಪು ಅವರ ಕಾರಿಗೆ ದಾಳಿ ಮಾಡಿ ಹೆದ್ದಾರಿವರೆಗೆ ತಳ್ಳಿಕೊಂಡು ಬಂದಿದೆ. ನಂತರ ಕಾಡಾನೆ ಪರಾರಿಯಾಗಿದೆ. ದಾಳಿಯಿಂದ ಕಾರು ಹಾನಿಯಾಗಿದ್ದು, ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.