ಮಡಿಕೇರಿ, ಏ. ೭: ರಾಜ್ಯದಾದ್ಯಂತ ಇದೀಗ ಚುನಾವಣೆಯ ಕಾವು.. ಅಭ್ಯರ್ಥಿಗಳ ಆಯ್ಕೆ, ಪ್ರಚಾರ., ಮತದಾರರ ಮನ ಓಲೈಸುವಿಕೆ., ಅಧಿಕಾರದ ಗದ್ದುಗೆ ಹಿಡಿಯಲು ನಾನಾ ತರಹದ ಕರಾಮತ್ತುಗಳು ನಡೆಯುತ್ತಿವೆ., ಜನಪ್ರತಿನಿಧಿಗಳಿಂದ ಹಿಡಿದು ಎಲ್ಲರೂ ಈ ಒಂದು ರಾಜಕೀಯ ದೊಂಬರಾಟದಲ್ಲಿ ಮುಳುಗಿ ಹೋಗಿದ್ದಾರೆ., ಆದರೆ., ಪ್ರತಿನಿಧಿಗಳನ್ನ ಕೈ ಹಿಡಿಯಬೇಕಾಗಿರುವ ಸಾಮಾನ್ಯ ಪ್ರಜೆ ಒಣ ಬಿಸಿಲಿನಲ್ಲಿ ಬೆಂದು ಬಡವಾಗುತ್ತಿದ್ದಾನೆ., ಮಳೆ ಬಾರದೆ ಬಿಸಿಲಿನ ಝಳಕ್ಕೆ ಭೂಮಿ ಬರಡಾಗುತ್ತಿದ್ದು, ಜಲಮೂಲಗಳು ಬತ್ತಿ ಹೋಗಿ ಪ್ರಪಾತ ಸೇರುತ್ತಿವೆ., ತಂಪು-ಸೊAಪಾಗಿದ್ದ., ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಕೊಡಗು ಜಿಲ್ಲೆಯಲ್ಲಿದೀಗ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ನಾಡಿನ ಜೀವನದಿ ಕಾವೇರಿ ಸೇರಿದಂತೆ ಎಲ್ಲ ನದಿ, ತೊರೆ, ತೋಡು, ಕೆರೆಗಳಲ್ಲಿನ ನೀರು ಬತ್ತಿ ಹೋಗುತ್ತಿದ್ದು ಜನರು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ..!
ಒAದೊಮ್ಮೆ ಕೊಡಗು ಹಸಿರು ವನಸಿರಿಗಳಿಂದ ಕಂಗೊಳಿಸುತ್ತಿದ್ದ ಸಂಪತ್ಭರಿತವಾದ ನಾಡಾಗಿತ್ತು. ಇಲ್ಲಿ ವರ್ಷಂಪೂರ್ತಿ ನದಿ, ತೊರೆ, ತೋಡು, ಕೆರಗಳು ತುಂಬಿರುತ್ತಿದ್ದವು., ಬರಬರುತ್ತಾ ಕಾಡೆಲ್ಲ ನಾಡಾಗುತ್ತಲೇ ಭೂಮಿ ಬರಡಾಗುತ್ತಾ ಹೋಗುತ್ತಿದೆ. ಕೆರೆಗಳು ಮಾಯವಾಗುತ್ತಿವೆ. ತೋಡು-ತೊರೆಗಳು ಇಲ್ಲವಾಗುತ್ತಿವೆ., ನದಿತಟಗಳೂ ಅತಿಕ್ರಮಣಗೊಂಡು ನೀರಿನ ಒರತೆ ಕ್ಷಿಣಿಸುತ್ತಿವೆ., ಅಂತರಜಲ ಮಟ್ಟ ಕುಸಿತಗೊಂಡು ಪಾತಾಳ ಸೇರುತ್ತಿದೆ. ಹಾಗಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಮಡಿಕೇರಿಗೆ ನೀರಿಲ್ಲ..!
ಜಿಲ್ಲಾ ಕೆಂದ್ರ, ಮಂಜಿನ ನಗರಿ ಮಡಿಕೇರಿಯಲ್ಲಿ ಈ ಹಿಂದೆ ನೀರಿ ಬರವಿತ್ತು. ನಂತರದಲ್ಲಿ ಕುಂಡಾಮೇಸ್ತಿç ಯೋಜನೆ ಜಾರಿಗೊಂಡ ಬಳಿಕ ನೀರಿನ ಸಮಸ್ಯೆ ಬಹುತೇಕ ಬಗೆಹರಿದಿತ್ತು. ಕುಂಡಾಮೇಸ್ತಿçಯಿAದ ಪ್ರಮುಖ ಜಲ ಸಂಗ್ರಹಾಗಾರ ಕೂಟುಹೊಳೆಗೆ ನೀರು ಹಾಯಿಸಿ ಅಲ್ಲಿಂದ ಮಡಿಕೇರಿ ನಗರಕ್ಕೆ ಸರಬರಾಜು ಮಾಡಲಾಗುತ್ತಿತ್ತು. ಕಳೆದ ಒಂದು ವಾರಗಳವರೆಗೂ ನೀರಿನ ಸಮಸ್ಯೆ ಉದ್ಭವಿಸಿರಲಿಲ್ಲ. ಇದೀಗ ಬಿಸಿಲಿನ ಬೇಗೆ ಹಾಗೂ ಮಳೆಯಾಗದ್ದರಿಂದ ಕುಂಡಾಮೇಸ್ತಿç ತೊರೆಯಲ್ಲಿ
(ಮೊದಲ ಪುಟದಿಂದ) ಹಾಗೂ ಕೂಟುಹೊಳೆಯಲ್ಲಿಯೂ ನೀರಿನ ಮಟ್ಟ ಕುಸಿದಿರುವದರಿಂದ ಮಡಿಕೇರಿ ನಗರದ ಜನತೆಗೆ ಸಮಸ್ಯೆ ಉಂಟಾಗಿದೆ. ಎಲ್ಲರಿಗೂ ನೀರನ್ನೊದಗಿಸುವ ಸಲುವಾಗಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ನಗರಸಭೆ ತೀರ್ಮಾನ ಮಾಡಿದ್ದು, ಅದರಂತೆ ಎರಡು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದೆ. ಅದೂ ನಿಯಮಿತವಾಗಿ..!ಸೋಮವಾರಪೇಟೆ: ಪ್ರಸಕ್ತ ವರ್ಷದ ಆರಂಭಿಕ ಮಳೆ ಇನ್ನೂ ಆಗಮಿಸದ ಹಿನ್ನೆಲೆ ವಾತಾವರಣ ಬಿಸಿಯೇರಿದ್ದು, ಕೃಷಿ ಫಸಲು ಉಳಿಸಿಕೊಳ್ಳಲು ರೈತರು ಸ್ಪ್ಲಿಂಕ್ಲರ್ ಗಳ ಮೊರೆ ಹೋಗಿದ್ದಾರೆ. ಇದರೊಂದಿಗೆ ಬೇಸಿಗೆಯ ತಾಪ ಹೆಚ್ಚಿದ್ದು ಕುಡಿಯುವ ನೀರಿಗೂ ಸಮಸ್ಯೆ ತಂದೊಡ್ಡಿದೆ.
ಸಾಧಾರಣವಾಗಿ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ವರ್ಷದ ಆರಂಭದ ಮಳೆಯಾಗಿ ನಂತರದ ದಿನಗಳಲ್ಲಿ ಒಂದೆರಡು ಬಾರಿ ಮಳೆ ಸುರಿಯುವ ವಾಡಿಕೆ ಈ ಬಾರಿ ಬದಲಾಗಿದ್ದು, ಮಾರ್ಚ್ ಕಳೆದು ಏಪ್ರಿಲ್ ಬಂದರೂ ಸಹ ಮಳೆ ಬಂದಿಲ್ಲ.
ಇದರಿAದಾಗಿ ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯುವ ಉತ್ತರ ಕೊಡಗಿನಾದ್ಯಂತ ಕಾಫಿ ಸೇರಿದಂತೆ ಇನ್ನಿತರ ಕೃಷಿಯನ್ನು ಉಳಿಸಿಕೊಳ್ಳಲು ಕೃಷಿಕ ವರ್ಗ ಹರಸಾಹಸ ಪಡುತ್ತಿದೆ.
ಹವಾಮಾನದಲ್ಲಿ ತಾಪಮಾನ ಅಧಿಕವಾಗಿರುವುದರಿಂದ ಅರೇಬಿಕಾ ಕಾಫಿ ಗಿಡಗಳು ಸೊರಗಿ ಹೋಗಿದ್ದರೆ, ಬಯಲು ಹಾಗೂ ಕಲ್ಲುಬಂಡೆಗಳಿರುವ ತೋಟದಲ್ಲಿ ಗಿಡಗಳು ಸುಟ್ಟುಹೋಗಿವೆ. ನೀರಿನ ಸೌಲಭ್ಯ ಇರುವ ಕೃಷಿಕರು ತೋಟಕ್ಕೆ ಸ್ಪ್ಲಿಂಕ್ಲರ್‌ಗಳ ಮೂಲಕ ನೀರು ಹಾಯಿಸುತ್ತಿದ್ದು, ಕೆಲವರು ಸಮೀಪದ ಹೊಳೆ, ಕೆರೆಗಳಿಂದ ನೀರು ಹಾಯಿಸುತ್ತಿದ್ದಾರೆ.
ತಾಲೂಕಿನ ಆಲೂರುಸಿದ್ದಾಪುರ, ಅಂಕನಳ್ಳಿ, ಬಾಣಾವರ, ಹೊಸಗುತ್ತಿ ಸೇರಿದಂತೆ ಇತರ ಸಮತಟ್ಟು ಪ್ರದೇಶದ ಹೊಲಗಳಲ್ಲಿ ಮುಸುಕಿನ ಜೋಳ ಬೆಳೆಯಲಾಗಿದ್ದು, ಫಸಲು ಉಳಿಸಿಕೊಳ್ಳಲು ಸ್ಪ್ಲಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದಾರೆ.
ಮಳೆ ದೂರವಾದ ಹಿನ್ನೆಲೆ ಕೆರೆಕಟ್ಟೆಗಳು, ಹೊಳೆ-ನದಿಗಳಲ್ಲಿ ನೀರಿನ ಪ್ರಮಾಣ ತಗ್ಗಿವೆ. ಕೆಲವೊಂದು ಕೆರೆಗಳಲ್ಲಿ ನೀರು ಇಂಗಿ ಹೋಗಿವೆ. ನಂದಿಗುAದ, ಗೋಣಿಮರೂರು, ಗಣಗೂರು ವ್ಯಾಪ್ತಿಯಲ್ಲಿ ಕೆರೆಗಳು ಒಣಗಿವೆ.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಇದೀಗ ಸಮರ್ಪಕವಾಗಿ ನೀರು ಲಭಿಸುತ್ತಿಲ್ಲ. ಕೋಟ್ಯಾಂತರ ರೂಪಾಯಿ ವ್ಯಯಿಸಿ ಹಾರಂಗಿ ಹಾಗೂ ದುದ್ದುಗಲ್ಲಿನಿಂದ ನೀರು ತರುವ ಯೋಜನೆ ಅನುಷ್ಠಾನಗೊಂಡಿದ್ದರೂ ನಿರ್ವಹಣೆಯ ಕೊರತೆಯಿಂದಾಗಿ ಬೇಸಿಗೆಯಲ್ಲಿ ನೀರು ಲಭಿಸುತ್ತಿಲ್ಲ ಎಂದು ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಆರೋಪಿಸಿದ್ದಾರೆ.
ಮೂರು ದಿನಕ್ಕೊಮ್ಮೆ ಅರ್ಧಗಂಟೆಗಳ ಕಾಲ ನೀರು ಬಿಟ್ಟರೆ ಸಾಕೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇಂದು ಸಂಜೆ ವೇಳೆಗೆ ಶನಿವಾರಸಂತೆ ವಿಭಾಗದಲ್ಲಿ ತುಂತುರು ಮಳೆಯಾಗಿದೆ. ವರ್ಷದ ಆರಂಭದ ಮಳೆ ಕನಿಷ್ಟವೆಂದರೂ ಒಂದೂವರೆ ಇಂಚಿನಷ್ಟು ಬೀಳಬೇಕಿತ್ತು. ತುಂತುರು ಮಳೆಯಿಂದ ಕೃಷಿಗೆ ಹೆಚ್ಚಿನ ಪ್ರಯೋಜನವಿಲ್ಲ ಎಂದು ಕೃಷಿಕ ಧರ್ಮಪ್ಪ ಅಭಿಪ್ರಾಯಿಸಿದ್ದಾರೆ.ಭಾಗಮಂಡಲ : ದಿನದಿಂದ ದಿನಕ್ಕೆ ಬಿಸಿಲ ಬೇಗೆ ಹೆಚ್ಚುತ್ತಿದ್ದು ಭಾಗಮಂಡಲ ವ್ಯಾಪ್ತಿಯಲ್ಲಿ ಒಂದು ತಿಂಗಳ ಹಿಂದೆ ಅಲ್ಪ ಪ್ರಮಾಣದ ಮಳೆ ಆಗಿದ್ದು ಬಿಟ್ಟರೆ ಇದುವರೆಗೆ ಮಳೆ ಆಗಿಲ್ಲ. ಭಾಗಮಂಡಲ ವ್ಯಾಪ್ತಿಯಲ್ಲಿ ಬಹುತೇಕ ಜಲ ಮೂಲಗಳು ಬತ್ತಿ ಹೋಗಿವೆ. ಕಾವೇರಿ ನದಿ ನೀರಿನ ಹರಿವಿನಲ್ಲಿ ಕಡಿಮೆ ಆಗಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನಕ್ಕಾಗಿ ನೀರು ಸಂಗ್ರಹಿಸಿ ಇಡಲಾಗುತ್ತಿದೆ. ಕಾವೇರಿ ನದಿ ಸೇರುವ ಉಪನದಿಗಳಲ್ಲೂ ನೀರು ಬತ್ತುತ್ತಿದ್ದು, ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ.
ಭಾಗಮAಡಲದಲ್ಲಿ ನೈಸರ್ಗಿಕ ನೀರನ್ನು ಮನೆ ಬಳಕೆಗೆ ಉಪಯೋಗಿಸುತ್ತಿದ್ದು, ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೂ ಒಂದು ವಾರ ಇದೇ ರೀತಿ ಬಿಸಿಲಿನ ತಾಪ ಮುಂದುವರಿದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಲಿದೆ.
ಕೋರAಗಾಲ ಸಣ್ಣಪುಲಿಕೋಟು ವ್ಯಾಪ್ತಿಗೆ ಇದುವರೆಗೆ ಮಳೆ ಆಗಿಲ್ಲ. ಭಾಗಮಂಡಲ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಅಲ್ಪ ಮಳೆಯಾಗಿದ್ದು ಈ ಎರಡು ಗ್ರಾಮಗಳಲ್ಲಿ ಮಳೆ ಆಗಿಲ್ಲ. ಕೆರೆ ಸೇರಿದಂತೆ ವಿವಿಧ ಜಲ ಮೂಲಗಳಿಂದ ತೋಟಗಳಿಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಲಾಗಿದ್ದು, ಇದೀಗ ಬ್ಯಾಕಿಂಗ್ ನೀಡಲು ನೀರು ಇಲ್ಲದಿರುವುದು ಬೆಳೆಗಾರರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಸುರಿಯುವ ಮಳೆಗಾಗಿ ಆಕಾಶದತ್ತ ರೈತರ ದೃಷ್ಟಿ ನೆಟ್ಟಿದೆ.ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಕೂಡುಮಂಗಳೂರು ಏತ ನೀರಾವರಿ ಯೋಜನೆಯ ನೂತನ ರೂ. ೨ ಕೋಟಿ ವೆಚ್ಚದ ಕಾಮಗಾರಿಗಳ ಮೂಲಕ ನೀರೆತ್ತಲು ನೂತನ ಯಂತ್ರಗಳನ್ನು ಅಳವಡಿಕೆ ಮಾಡಿದ್ದರೂ ಕಾವೇರಿ ನದಿಯಲ್ಲಿ ನೀರಿನ ಹರಿಯುವಿಕೆ ಮಟ್ಟದಲ್ಲಿ ಕ್ಷೀಣಗೊಂಡ ಹಿನ್ನೆಲೆಯಲ್ಲಿ ನೀರು ಮೇಲಕ್ಕೆ ಬರುತ್ತಿಲ್ಲ. ಇದರಿಂದಾಗಿ ಕೂಡ್ಲೂರು ಭಾಗದ ರೈತರ ಬೆಳೆಗೆ ನೀರು ಇಲ್ಲದಂತಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಕೂಡುಮಂಗಳೂರು ಏತ ನೀರಾವರಿ ಯೋಜನೆಯ ಘಟಕದ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಹೊಸ ಯೋಜನೆಯನ್ನು ರೂಪಿಸಿ ಹಳೆಯ ಏತ ನೀರಾವರಿ ಘಟಕದ ಸಮೀಪವೇ ನೂತನವಾಗಿ ರೂ. ೨ ಕೋಟಿ ವೆಚ್ಚದಲ್ಲಿ ಹೊಸ ತಂತ್ರಜ್ಞಾನ ಯಂತ್ರಗಳನ್ನು ಅಳವಡಿಕೆ ಮಾಡಿ ಏತ ನೀರಾವರಿ ಘಟಕವನ್ನು ಆರಂಭ ಮಾಡಲಾಗಿತ್ತು. ನದಿಯಿಂದ ಪೈಪ್‌ಲೈನ್‌ಗಳ ಮೂಲಕ ನೀರು ಮೈಲೆತ್ತುವ ಪೈಪ್‌ಗಳನ್ನು ಸಮರ್ಪಕವಾಗಿ ನದಿಯ ಸಮತಟ್ಟನ್ನು ಕಾಯ್ದುಕೊಂಡು ಅಳವಡಿಕೆ ಮಾಡದೆ ಇರುವುದರಿಂದಾಗಿ ಬೇಸಿಗೆ ಕಾಲದಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದರಿಂದ ಏತ ನೀರಾವರಿ ಪೈಪ್‌ಗೆ ನೀರು ಸಮಗ್ರವಾಗಿ ಸಿಗದೆ ಇರುವುದರಿಂದ ರೈತರ ಜಮೀನಿಗೆ ಕಾಲುವೆಗಳ ಮೂಲಕ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಕೂಡ್ಲೂರು ಭಾಗ ರೈತರ ಜಮೀನಿನ ಬೆಳೆಗಳು ಒಣಗುತ್ತಿವೆ. ಸಂಬAಧಿಸಿದ ಇಲಾಖೆಯವರು ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಈ ಭಾಗದ ರೈತರ ಒತ್ತಾಯವಾಗಿದೆ.
ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿಗೆ ಅಳವಡಿಕೆ ಮಾಡಿರುವ ಏತ ನೀರಾವರಿ ಯೋಜನೆಗೆ ೧೦೦ ಎಕರೆಗಳಷ್ಟು ಪ್ರದೇಶವಿದ್ದರೂ ನೂತನವಾಗಿ ಅಳವಡಿಕೆ ಮಾಡಲಾಗಿರುವ ಯಂತ್ರಗಳ ಮೂಲಕ ವರ್ಷದ ಎರಡೂ ಬೆಳೆಗಳಿಗೆ ನೀರನ್ನು ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಭರವಸೆ ನೀಡಿದ ಮೇರೆಗೆ ಈ ವ್ಯಾಪ್ತಿಯ ೭೦ಕ್ಕೂ ಹೆಚ್ಚು ರೈತರು ಈ ಸಾಲಿನಲ್ಲಿ ಸಿಹಿಗೆಣಸು ಸೇರಿದಂತೆ ಉಪ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ ನದಿಯಿಂದ ನೀರು ಎತ್ತದ ಹಿನ್ನೆಲೆಯಲ್ಲಿ ಈ ಭಾಗ ಬೆಳೆಗಳು ಒಣಗುತ್ತಿವೆ. ಸಂಬAಧಿಸಿದ ಅಧಿಕಾರಿ ವರ್ಗದವರು ನದಿಗೆ ಪೈಪ್ ಅಳವಡಿಕೆ ಕ್ರಮಗಳನ್ನು ಸರಿಪಡಿಸುವಂತೆ ಕೂಡ್ಲೂರು ಗ್ರಾಮದ ಪ್ರಗತಿಪರ ರೈತರಾದ ಗಿರೀಶ್, ಕೆ.ಎಸ್. ಕೃಷ್ಣಾಚಾರಿ ರಾಜಗೋಪಾಲ, ಸತೀಶ್, ನಾಗರಾಜ್, ಸದಾ, ಹರೀಶ್ ರಾಜಾಚಾರಿ ಸೇರಿದಂತೆ ಅನೇಕ ಮಂದಿ ರೈತರ ಒತ್ತಾಯಿಸಿದ್ದಾರೆ.ಕಣಿವೆ : ಕುಶಾಲನಗರ ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಗೊಂಡ ಗುಮ್ಮನಕೊಲ್ಲಿ ಗ್ರಾಮದಲ್ಲಿನ ಮಹಿಳೆಯರು ಕುಡಿವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರನ್ನು ಸಂಗ್ರಹಿಸಲು ಇಲ್ಲಿನ ಮಹಿಳೆಯರು ಸಾಹಸ ಪಡುವಂತಹ ದುಸ್ಥಿತಿ ಎದುರಾಗಿದೆ. ಇಲ್ಲಿ ಒಂದೆಡೆ ಹದಿನೈದು ಕುಟುಂಬಗಳಿದ್ದು ಎಂಭತ್ತಕ್ಕೂ ಹೆಚ್ಚಿನ ನಿವಾಸಿಗಳಿದ್ದಾರೆ.
ಇಷ್ಟು ಮಂದಿಗೆ ಕುಡಿಯುವ ನೀರು ಸೇರಿದಂತೆ ಅಡುಗೆ, ಸ್ನಾನ, ಇತರ ಕಾರ್ಯಗಳಿಗೆಂದು ತಲಾ ಹತ್ತು ಬಿಂದಿಗೆಯಾದರೂ ನೀರು ಬೇಕು. ಆದರೆ ಇಲ್ಲಿ ಇದೀಗ ಮನೆಯೊಂದಕ್ಕೆ ಕೇವಲ ಐದು ಬಿಂದಿಗೆಗಳು ಕೂಡ ಸಿಗುತ್ತಿಲ್ಲ ಎಂಬುದು ಮಹಿಳೆಯರ ಅಳಲು. ಕುಡಿಯುವ ನೀರು ಬರುವ ಸಮಯವನ್ನು ಕಾದು ಕೂರುವ ಮಹಿಳೆಯರು ನಳದಲ್ಲಿ ನೀರು ತೊಟ್ಟಿಕ್ಕಲು ಮುಂದಾಗುತ್ತಿದ್ದAತೆ ಅದನ್ನು ಸಂಗ್ರಹಿಸಲು ನಾ ಮುಂದು ತಾ ಮುಂದು ಎಂದು ನೀರು ಸಂಗ್ರಹಿಸುವುದು ಇಲ್ಲಿ ಮಾಮೂಲಿಯಾಗಿದೆ.
ಆಗಾಗ್ಗೆ ನೀರಿಗಾಗಿ ಇಲ್ಲಿನ ಮಹಿಳೆಯರಲ್ಲಿ ಶೀತಲ ಸಮರವೂ ನಡೆಯುವುದುಂಟು ಎನ್ನುತ್ತಾರೆ ಸ್ಥಳೀಯರು. ನಳದಲಿ ತೊಟ್ಟಿಕ್ಕುವ ನೀರನ್ನು ತುಂಬಿಸಲು ಕಾದು ಕೂರುವ ಸ್ಥಿತಿ. ಕೂಡಲೇ ನಮಗೆ ಸಮರ್ಪಕವಾದ ಕಣಿವೆ : ಈ ಬಾರಿ ಯುಗಾದಿ ಹಬ್ಬ ಕಳೆದು ವಾರ ಕಳೆದರೂ ಕೂಡ ವರುಣ ಕೃಪೆ ತೋರುತ್ತಿಲ್ಲ. ಹಾಗಾಗಿ ಬಿಸಿಲ ತಾಪಮಾನ ಹೆಚ್ಚಾಗಿದೆ. ಇದರಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಳ್ಳುವ ಅಪಾಯದ ಸ್ಥಿತಿ ನಿರ್ಮಾಣಗೊಂಡಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೂರ್ನಾಲ್ಕು ಬಾರಿ ಮಳೆ ಸುರಿದು ಭೂಮಿಯನ್ನು ತಂಪಾಗಿಸಿತ್ತು. ಹಾಗಾಗಿ ಕಾವೇರಿ ನದಿಯಲ್ಲಿ ನೀರು ಸರಾಗವಾಗಿ ಹರಿದಿತ್ತು. ಈ ಬಾರಿ ಏಕೋ ಏನೋ ಮಳೆಯೇ ಬರುತ್ತಿಲ್ಲ. ಏರಿದ ತಾಪಮಾನದಿಂದಾಗಿ ಕಾಂಕ್ರಿಟ್ ಅಳವಡಿತ ಮನೆಗಳಲ್ಲಿ ಸೆಖೆಯ ಪ್ರಮಾಣ ತೀವ್ರವಾಗಿ ಕಾಡುತ್ತಿದೆ. ರಾತ್ರಿ ಸಮಯದಲ್ಲಂತೂ ಒಂದು ವೇಳೆ ವಿದ್ಯುತ್ ಕಡಿತವಾದರೆ ನಿದ್ರೆ ಮಾಡುವವರದ್ದು ದೇವರೇ ಗತಿ. ಕಾವೇರಿ ನದಿ ತೀರವೂ ಸೇರಿದಂತೆ ಹಳ್ಳ - ಕೊಳ್ಳಗಳಲ್ಲಿ, ಕೆರೆ - ಕಟ್ಟೆಗಳ ತೀರದಲ್ಲಿ ಬಿಸಿಲ ತಾಪಮಾನಕ್ಕೆ ನೀರಿನ ಪ್ರಮಾಣ ಆವಿಯಾಗುತ್ತಿದೆ.
ಹಾಗೆಯೇ ಕೃಷಿಕರ ಹೊಲ - ಗದ್ದೆ, ತೋಟಗಳಲ್ಲಿ ಒಣಗುತ್ತಿರುವ ಅಡಿಕೆ, ತೆಂಗು, ಬಾಳೆ, ಶುಂಠಿ ಮೊದಲಾದ ಬೆಳೆಗಳನ್ನು ಉಳಿಸಿಕೊಳ್ಳಲು ಕೊಳವೆ ಬಾವಿಗಳಲ್ಲಿ ನೀರನ್ನು ಮೇಲೆತ್ತಿ ಬೆಳೆಗಳಿಗೆ ಹರಿಸಲಾಗುತ್ತಿದೆ. ಕುಶಾಲನಗರ ಪಟ್ಟಣದ ಸುತ್ತಲು ಹರಿದಿರುವ ಕಾವೇರಿ ನದಿಯಲ್ಲಿ ಈಗಾಗಲೇ ನೀರಿನ ಹರಿವು ದಿನದಿಂದ ದಿನಕ್ಕೆ ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಇದೀಗ ನದಿಯಲ್ಲಿ ಕಲ್ಲು ಬಂಡೆಗಳು, ಬೆಳೆದಿರುವ ಕುರುಚಲು ಗಿಡಗಳು ಕಾಣಸಿಗುತ್ತಿವೆ.
-(ಕುಡೆಕಲ್ ಸಂತೋಷ್, ಕುಯ್ಯಮುಡಿ ಸುನಿಲ್,
ಕೆ.ಎಸ್. ಮೂರ್ತಿ, ವಿಜಯ್, ನಾಗರಾಜಶೆಟ್ಟಿ, ಕೆ.ಎಂ. ಇಸ್ಮಾಯಿಲ್)