ಶ್ರೀಮಂಗಲ, ಏ. ೮: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬ ಆಶ್ರಯದಲ್ಲಿ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ತಾ. ೯ರಂದು (ಇಂದು) ನಡೆಯಲಿದೆ.
ಶನಿವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ, ಸೆಮಿಫೈನಲ್ಗೆ ಪಂದ್ಯAಡ, ಕಳಕಂಡ, ಮಂಡುವAಡ, ಅಚ್ಚಪಂಡ ಕುಟುಂಬ ತಂಡ ಪ್ರವೇಶಿಸಿದ್ದು, ಭಾನುವಾರ ಸೆಮಿಫೈನಲ್ನಲ್ಲಿ ವಿಜೇತ ತಂಡಗಳು ಫೈನಲ್ನಲ್ಲಿ ಸೆಣಸಾಡಲಿವೆ.
ಕ್ವಾರ್ಟರ್ ಫೈನಲ್ನ ಮೊದಲ ಪಂದ್ಯದಲ್ಲಿ ಪಂದ್ಯAಡ ತಂಡ (೭೯/೫) ಕೊಟ್ಟಂಗಡ ತಂಡದ (೭೫/೬) ವಿರುದ್ಧ ೫ ವಿಕೆಟ್ ಗೆಲುವು ಸಾಧಿಸಿತು. ಕೊಟ್ಟಂಗಡ ರಂಜು ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಕಳಕಂಡ ತಂಡ (೬೧/೩) ಅಳಮೇಂಗಡ ತಂಡದ (೫೭/೭) ವಿರುದ್ಧ ಗೆಲುವು ಸಾಧಿಸಿತು. ಅಳಮೇಂಗಡ ತಮ್ಮ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಅಣ್ಣಳಮಾಡ ತಂಡ (೩೫/೮) ವಿರುದ್ಧ ಮಂಡುವAಡ (೩೭/೬) ತಂಡ ಗೆಲುವು ಸಾಧಿಸಿತು. ಅಣ್ಣಳಮಾಡ ಭವನ್ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಚೆಕ್ಕೇರ ತಂಡ (೪೫/೮) ವಿರುದ್ಧ ಅಚ್ಚಪಂಡ (೫೫/೭) ಗೆಲುವು ಸಾಧಿಸಿತು. ಚೆಕ್ಕೇರ ಕಾರ್ಯಪ್ಪ ಪಂದ್ಯ ಪುರುಷ ಪ್ರಶಸ್ತಿ ಪಡೆದರು.
ಪಂದ್ಯಾವಳಿಯಲ್ಲಿ ವಿನ್ನರ್ಸ್ ತಂಡ ರೂ.೫೦ ಸಾವಿರ ಟ್ರೋಫಿ, ರನ್ನರ್ಸ್ ತಂಡ ರೂ.೩೦ ಸಾವಿರ ನಗದು-ಟ್ರೋಫಿ, ೩ನೇ ಸ್ಥಾನ ಪಡೆಯುವ ತಂಡಕ್ಕೆ ರೂ.೨೦ ಸಾವಿರ ನಗದು-ಟ್ರೋಫಿ ಪಡೆಯಲಿದೆ.
ಮಹಿಳಾ ಪಂದ್ಯ: ತಾ.೧ರಂದು ಉದ್ಘಾಟನಾ ಕಾರ್ಯಕ್ರಮ ದಿನ ಮಹಿಳಾ ತಂಡಗಳ ನಡುವೆ ಆಯೋಜಿಸಲಾಗಿದ್ದ ಪಂದ್ಯದಲ್ಲಿ ಜಯಗಳಿಸಿದ್ದ ಟಿ. ಶೆಟ್ಟಿಗೇರಿ ಸಂಭ್ರಮ ತಂಡ ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟ ತಂಡದೊAದಿಗೆ ತಾ. ೯ರಂದು (ಇಂದು) ಪಂದ್ಯ ನಡೆಯಲಿದೆ. ವಿಜೇತಾ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನವಿದೆ.
ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಅಂರ್ರಾಷ್ಟಿçÃಯ ಮಾಜಿ ಅಥ್ಲೆಟ್ ತೀತಮಾಡ ಅರ್ಜುನ್ ದೇವಯ್ಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.