ಮಡಿಕೇರಿ, ಏ. ೮: ಆಸಕ್ತಿಯಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಉತ್ತಮ ಭವಿಷ್ಯ ಕಂಡುಕೊಳ್ಳಬಹುದೆAದು ಒಲಂಪಿಯನ್ಗಳಾದ ಮನೆಯಪಂಡ ಸೋಮಯ್ಯ ಹಾಗೂ ಅಂಜಪರವAಡ ಸುಬ್ಬಯ್ಯ ಅವರುಗಳು ಕರೆ ನೀಡಿದರು.
ವಾಂಡರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇಲ್ಲಿನ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಿ.ಶಂಕರ್ ಸ್ವಾಮಿ ಸ್ಮರಣಾರ್ಥ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಭಾಗವಹಿಸಿ ಅವರು ಮಕ್ಕಳಿಗೆ ಹಿತವಚನ ನುಡಿದರು. ಸೋಮಯ್ಯ ಮಾತನಾಡಿ; ಇಂತಹ ಶಿಬಿರಗಳಿಂದ ಸಾಕಷ್ಟು ಕಲಿಯಬಹುದಾಗಿದೆ. ಜೀವನದಲ್ಲಿ ಐದು ಎಸ್ಗಳನ್ನು, ಅಂದರೆ ‘ಸ್ಪೀಡ್, ಸ್ಟೆçಂತ್, ಸ್ಟೆಮಿನಾ, ಸ್ಕಿಲ್ ಹಾಗೂ ಸ್ಪೋರ್ಟ್ಸ್ಮೆನ್ಶಿಪ್’ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಕ್ರೀ್ರಡಾಪಟು ಹಾಗೂ ಉತ್ತಮ ಮನುಜನಾಗಲು ಸಾಧ್ಯವಾಗುತ್ತದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಎ.ಬಿ.ಸುಬ್ಬಯ್ಯ ಮಾತನಾಡಿ; ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಉತ್ತಮ ಪ್ರಜೆಯಾಗಲು ಸಾಧ್ಯ. ಸಮಾಜದಲ್ಲೂ ಗುರುತಿಸಲ್ಪಡುತ್ತಾರೆ, ಮಕ್ಕಳು ಟಿವಿ, ಮೊಬೈಲ್ ಬಿಟ್ಟು ಮೈದಾನಕ್ಕೆ ಬರಬೇಕು. ಶಾರೀರಿಕ ದೃಢತೆ ಇದ್ದರೆ ಜೀವನವನ್ನು ಸಂತೋಷದಿAದ ಕಳೆಯಬಹುದು. ಕ್ರೀಡೆಯಿಂದ ಇದು ಸಾಧ್ಯವಾಗಲಿದೆ. ಶಿಬಿರದಲ್ಲಿ ಕಲಿಸುವದನ್ನು ನಿರಂತರ ಅಭ್ಯಾಸ ಮಾಡಬೇಕು. ಇಲ್ಲಿ ತರಬೇತುದಾರರು ತಮ್ಮ ಸಮಯವನ್ನು ನಿಮಗಾಗಿ ಮೀಸಲಿರಿಸಿ ಕಲಿಸಿಕೊಡುತ್ತಿದ್ದಾರೆ. ಇದು ನಿಮ್ಮ ಜೀವನದಲ್ಲಿ ಸಹಕಾರಿಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಿಬಿರದ ಸಂಚಾಲಕ ಬಾಬು ಸೊಮಯ್ಯ, ತರಬೇತುದಾರರಾದ ಬೊಪ್ಪಂಡ ಶಾಂ ಪೂಣಚ್ಚ, ಕಿರುಂದAಡ ಗಣೇಶ್, ಕುಡೆಕಲ್ ಸಂತೋಷ್, ಅಶೋಕ್ ನಾಯ್ಡು, ಹರೇಂದ್ರ ಇದ್ದರು.