ವೀರಾಜಪೇಟೆ, ಏ. ೮: ಅರಮೇರಿ ಕಳಂಚೇರಿ ಮಠದಲ್ಲಿ ತಾ. ೯ ರಂದು (ಇಂದು) ಮಧ್ಯಾಹ್ನ ೩ ಗಂಟೆಗೆ ಹೊಂಬೆಳಕು ಮಾಸಿಕ ತತ್ವಚಿಂತನಾಗೋಷ್ಠಿಯ ೨೦೯ ನೇ ಕಾರ್ಯಕ್ರಮ ಜರುಗಲಿದೆ.

ಕೂಡಿಗೆ ಕ್ರೀಡಾಶಾಲೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಶಿಕ್ಷಕಿ, ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿ ಸಿದ್ದ ಕುಂತಿ ಬೋಪಯ್ಯ ಅವರ ಸೇವಾ ಸಾಧನೆ ಕುರಿತ ಸಾಕ್ಷ÷್ಯಚಿತ್ರ ಪ್ರದರ್ಶನಗೊಳ್ಳಲಿದೆ.

ಕಾರ್ಯಕ್ರಮದಲ್ಲಿ ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ನಿವೃತ್ತ ಪ್ರಾಂಶುಪಾಲೆ ಕುಂತಿಬೋಪಯ್ಯ, ಪತ್ರಕರ್ತ ಅನಿಲ್ ಎಚ್.ಟಿ. ಪಾಲ್ಗೊಳ್ಳ ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.