ಕುಶಾಲನಗರ, ಏ. ೬: ಕುಶಾಲನಗರದಲ್ಲಿ ವ್ಯಾಪಾರಿ ಒಬ್ಬನಿಗೆ ಚಾಕು ಇರಿದು ಗಾಯಗೊಳಿಸಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ರಫ್ (೪೩) ಎಂಬಾತನನ್ನು ೧೨ ವರ್ಷಗಳ ನಂತರ ಪತ್ತೆ ಹಚ್ಚಿ ಬಂಧಿಸುವಲ್ಲಿ ಕುಶಾಲನಗರ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

೨೦೧೧ರಲ್ಲಿ ಕುಶಾಲನಗರ ರಥ ಬೀದಿಯಲ್ಲಿ ಅಶ್ರಫ್ ರಾಜಸ್ಥಾನಿ ಮೂಲದ ಉದ್ಯಮಿ ಓರ್ವನಿಗೆ ಚಾಕುವಿನಲ್ಲಿ ಇರಿದು ನಂತರ ತಲೆಮರಿಸಿಕೊಂಡಿದ್ದ. ಬೆಂಗಳೂರಿನಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಕುಶಾಲನಗರ ಪೊಲೀಸರ ತಂಡ ಯಶಸ್ವಿಯಾಗಿದ್ದು ಆರೋಪಿ ಅಶ್ರಫ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.