ಮಡಿಕೇರಿ, ಏ. ೬: ಅಧಿಕೃತ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಅವರು ಕರ್ನಾಟಕ ಅರಣ್ಯ ಕಾಯಿದೆ ೧೯೬೩ರ ಕಲಂ ೭೧(ಎ ಯಿಂದ (ಜಿ)ಯವರೆಗೆ ಹಾಗೂ ಈವರೆಗಿನ ತಿದ್ದುಪಡಿಯನುಸಾರ ದತ್ತವಾದ ಅಧಿಕಾರದಂತೆ ವಲಯ ಅರಣ್ಯ ಅಧಿಕಾರಿ, ಶನಿವಾರಸಂತೆ, ಕುಶಾಲನಗರ, ಸೋಮವಾರಪೇಟೆ ವಲಯದಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಪ್ರಕರಣದಲ್ಲಿ ಅಮಾನತ್ತು ಪಡಿಸಿದ ವಾಹನ ಮತ್ತು ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡು ಆದೇಶಿಸಲಾಗಿದೆ.

ಶನಿವಾರಸಂತೆ ವಲಯದಲ್ಲಿ ಅಮಾನತ್ತುಪಡಿಸಿದ ವಾಹನ ಸಂಖ್ಯೆ ಮಾರುತಿ ೮೦೦ ಕಾರು ಕೆಎ ೧೯ಎನ್-೪೯೧೧, ಮಾರುತಿ ಓಮ್ನಿ ಕೆಎ-೨೦ಸಿ-೨೦೫೦, ಮಾರುತಿ ಓಮ್ನಿ ಕೆಎ-೦೪ಝಡ್-೬೫೬೬, ಮಾರುತಿ ಓಮ್ನಿ ಕೆಎ-೧೨ಪಿ-೬೭೧, ಬಜಾಜ್ ಡಿಸ್ಕವರಿ ಬೈಕ್ ಕೆಎ-೦೪ ಇವಿ-೨೭೦೦, ಹೀರೋ ಹೊಂಡಾ ಸಿಬಿಝಡ್ ಬೈಕ್ ಕೆಎ-೧೨ಹೆಚ್-೩೭೫೮, ಬಜಾಜ್ ಡಿಸ್ಕವರಿ ಬೈಕ್ ಕೆಎ-೧೩ವೈ-೨೩೨೧, ಮಾರುತಿ ಓಮ್ನಿ ವಾಹನ ಕೆಎ-೦೨ಎನ್-೬೩೪ ಮತ್ತು ಮಾರುತಿ ಓಮ್ನಿ ವಾಹನ ಕೆಎ-೦೨ಎನ್-೧೯೧೭.

ಸೋಮವಾರಪೇಟೆ ವಲಯದಲ್ಲಿ ಅಮಾನತ್ತುಪಡಿಸಿದ ವಾಹನ ಸಂಖ್ಯೆ ಮಾರುತಿ ಸುಜುಕಿ ಕಾರು ಕೆಎ-೦೪ಎಂ ೯೨೯೨, ಅಶೋಕ ಲೈಲ್ಯಾಂಡ್ ಮಿನಿಟ್ರಕ್ ಕೆಎ ೧೯ಎಬಿ-೧೦೨೯, ಬಜಾಜ್ ಪಲ್ಸರ್ ಕೆಎ-೧೨ಎಸ್-೪೦೭೦, ಮಹೇಂದ್ರ ಕೆಯುವಿ ಕಾರು ಕೆಎಲ್ ೬೦ಎಂ ೧೧೩೧, ಬಜಾಜ್ ಆಟೋರಿಕ್ಷಾ ಕೆಎ-೧೨ಬಿ ೫೦೯೧, ಟಿವಿಎಸ್ ಸ್ಟಾರ್ ಸಿಟಿ ಬೈಕ್ ಕೆಎ-೪೫ಇಬಿ-೬೭೭೧, ಆಪೆ ಆಟೋ ರಿಕ್ಷಾ ಕೆಎ-೧೨ಬಿ-೬೭೫೧ ಮತ್ತು ಟಾಟಾ ೪೦೭ ಮಿನಿ ವಾಹನ (ಕ್ಯಾಂಟರ್) ಕೆಎಲ್-೭೯ಎ-೨೮೩೪.

ಕುಶಾಲನಗರ ವಲಯದಲ್ಲಿ ಅಮಾನತ್ತುಪಡಿಸಿದ ವಾಹನ ಸಂಖ್ಯೆ ಮಾರುತಿ ಓಮ್ನಿ ಕೆಎ-೧೨ಪಿ-೨೭೧೫, ಮಾರುತಿ ಓಮ್ನಿ ಕೆಎ-೦೨ಪಿ-೭೧೧೮, ಮಾರುತಿ ಓಮ್ನಿ ಕೆಎ-೦೩ಎನ್-೩೦೪, ಮಾರುತಿ ೮೦೦ ಕಾರು ಕೆಎ-೦೧ಪಿ-೩೭೯೦ ಮತ್ತು ಅಶೋಕ ಲೈಲ್ಯಾಂಡ್ ಗೂಡ್ಸ್ ಕೆಎ-೫೫ಎ-೧೪೫೪. ಈ ಆದೇಶವನ್ನು ಹೊರಡಿಸಿದ ದಿನಾಂಕದಿAದ ೩೦ ದಿನಗಳ ಒಳಗೆ ಸಂಬAಧಿಸಿದವರು ಯಾವುದೇ ಮೇಲ್ಮನವಿಯನ್ನು ಸಲ್ಲಿಸದೇ ಇದ್ದಲ್ಲಿ ಇದೇ ಅಂತಿಮ ಆದೇಶವಾಗಿದೆ. ಅಲ್ಲದೇ ಮೇಲ್ಮನವಿಯ ಅವಧಿ ಮೀರಿದ ಬಳಿಕ ವಾಹನ ಮತ್ತು ಸೊತ್ತನ್ನು ಕಾನೂನು ರೀತ್ಯಾ ವಿಲೇ ಮಾಡಲು ಕೂಡ ಆದೇಶಿಸಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅಧಿಕೃತ ಅಧಿಕಾರಿ ಎ.ಟಿ. ಪೂವಯ್ಯ ತಿಳಿಸಿದ್ದಾರೆ.