ಮಡಿಕೇರಿ, ಏ. ೭: ನಗರದ ಪ್ರಮುಖ ಪ್ರವಾಸಿತಾಣಗಳಲ್ಲಿ ಒಂದಾದ ರಾಜಾಸೀಟ್ ಉದ್ಯಾನದಲ್ಲಿ ಸಾಲುಸಾಲು ರಜೆ ಹಿನ್ನೆಲೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬAದರು.
ಗುಡ್ ಫ್ರೆöÊಡೆ, ವಾರಾಂತ್ಯ ರಜೆ ಇರುವ ಕಾರಣ ದೇಶದ ವಿವಿಧೆಡೆಗಳಿಂದ ಪ್ರವಾಸಿಗರು ಮಂಜಿನ ನಗರಿಗೆ ಬಂದಿದ್ದಾರೆ. ರಾಜಾಸೀಟ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವ ಪರಿಣಾಮ ಸಂಚಾರ ದಟ್ಟಣೆ ಕೂಡ ಏರ್ಪಟ್ಟಿತು.