ಕುಶಾಲನಗರ, ಏ.೭: ಕುಶಾಲನಗರ- ಕೊಪ್ಪ ಗಡಿಭಾಗದ ವಾಹನಗಳ ತಪಾಸಣಾ ಕೇಂದ್ರಗಳಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆಯಿಲ್ಲದ ೭.೫೨ ಲಕ್ಷ ರೂಗಳ ಹಣ ಪತ್ತೆ ಹಚ್ಚಿ ಚುನಾವಣಾ ಆಯೋಗದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಗೆ ಬರುತ್ತಿದ್ದ ಎರಡು ವಾಹನಗಳಲ್ಲಿ ರೂ. ೨.೧೨ ಲಕ್ಷ ಮತ್ತು ಕೊಡಗು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವಾಹನದಲ್ಲಿ ರೂ. ೫.೪೦ ಲಕ್ಷ ಪತ್ತೆಯಾಗಿವೆ.

ಕುಶಾಲನಗರ ಗಡಿ ಭಾಗದಲ್ಲಿ ಪತ್ತೆಯಾದ ಹಣದ ದಾಖಲೆಗಳು ದೊರಕಿದ ಹಿನ್ನೆಲೆಯಲ್ಲಿ ಹಣವನ್ನು ಹಿಂತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೂ. ೫.೪೦ ಲಕ್ಷ ಹಣಕ್ಕೆ ದಾಖಲೆಗಳು ಲಭಿಸದ ಕಾರಣ ಅಧಿಕಾರಿಗಳು ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ವಿದೇಶಿ ವ್ಯಕ್ತಿ ಡಾಲರ್ ಹಣವನ್ನು ಕುಶಾಲನಗರ ಬ್ಯಾಂಕ್‌ನಲ್ಲಿ ಭಾರತೀಯ ಕರೆನ್ಸಿಗೆ ಬದಲಾಯಿಸಿಕೊಂಡು ತೆರಳುತ್ತಿದ್ದ ಸಂದರ್ಭ ಕೊಪ್ಪ ಕೇಂದ್ರದ ಚುನಾವಣಾ ಅಧಿಕಾರಿಗಳ ತಂಡ ಪತ್ತೆ ಮಾಡಿದ್ದು, ಆತ ಸೂಕ್ತ ದಾಖಲೆ ನೀಡದ ಹಿನ್ನೆಲೆ ಹಣವನ್ನು ವಶಪಡಿಸಿಕೊಂಡಿದ್ದಾರೆ.

ವಾರಾAತ್ಯದ ರಜಾ ಹಿನ್ನೆಲೆಯಲ್ಲಿ ಮೈಸೂರು ಕುಶಾಲನಗರ ಮೂಲಕ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಧಿಕವಾಗಿದ್ದು, ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೨ ಗಂಟೆ ತನಕ ಸಾವಿರಾರು ವಾಹನಗಳು ಕುಶಾಲನಗರ ಮೈಸೂರು ರಸ್ತೆಯ ಸುಮಾರು ಹತ್ತು ಕಿಲೋಮೀಟರ್ ಉದ್ದಕ್ಕೆ ಸ್ಥಗಿತಗೊಳ್ಳುವ ಮೂಲಕ ಸಂಚಾರ ವ್ಯವಸ್ಥೆ ನಿರಂತರ ನಾಲ್ಕು ಗಂಟೆ ಕಾಲ ಏರುಪೇರಾಗಿ ತುರ್ತು ವಾಹನಗಳ ಓಡಾಟಕ್ಕೆ ಕೂಡ ಸಮಸ್ಯೆ ಉಂಟಾಗಿತ್ತು.