ಕುಶಾಲನಗರ, ಏ. ೬: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೈಲುಕೊಪ್ಪೆಯ ವ್ಯಕ್ತಿಯೊಬ್ಬನನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಬೈಲುಕೊಪ್ಪೆಯ ಮಂಜು ಎಂಬಾತ ಬಂಧಿತ ಆರೋಪಿ. ಇತ್ತೀಚೆಗೆ ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಗಾಂಜಾ ಆರೋಪಿ ಓರ್ವನನ್ನು ಬಂಧಿಸಿದ್ದು, ಆತ ನೀಡಿದ ಸುಳಿವಿನ ಮೇರೆಗೆ ತಲೆಮರೆಸಿಕೊಂಡಿದ್ದ ಮಂಜು ಎಂಬಾತನ ಬಂಧನ ನಡೆದಿದ್ದು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.