ಭಾಗಮಂಡಲ, ಏ. ೬: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಕುದುಕುಳಿ ಕ್ರಿಕೆಟ್ ಸಮಿತಿ ಆಯೋಜಿಸಿರುವ ಗೌಡ ಕುಟುಂಬಗಳ ನಡುವಿನ ಕ್ರಿಕೆಟ್ ಪಂದ್ಯಾಟ ಕುದುಕುಳಿ ಐನ್ಮನೆ ಕ್ರಿಕೆಟ್ ಕಪ್ ೨೦೨೩ರಲ್ಲಿ ಎಡಿಕೇರಿ ಮುಂದಿನ ಸುತ್ತು ಪ್ರವೇಶಿಸಿದೆ.
ಕೋಳಿಮಾಡು ಮತ್ತು ಎಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಳಿಮಾಡು ತಂಡ ೫೦ ರನ್ ಗಳಿಸಿತು. ಎಡಿಕೇರಿ ತಂಡವು ಏಳು ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು. ಮುಂದಿನ ಪಂದ್ಯದಲ್ಲಿ ಕೂಡಕಂಡಿ ಹಾಗೂ ಬಿಳಿಯಂಡ್ರ ತಂಡಗಳು ಸ್ಪರ್ಧಿಸಿದವು. ಬಿಳಿಯಂಡ್ರ ತಂಡ ಬ್ಯಾಟಿಂಗ್ ಮಾಡಿ ೧೧೦ ರನ್ ಗಳಿಸಿತು. ಕೂಡಕಂಡಿ ತಂಡ ೯೨ ರನ್ ಗಳಿಸಿ ೧೨ ರನ್ಗಳ ಸೋಲನ್ನು ಅನುಭವಿಸಿತು. ಇದುವರೆಗೆ ನಡೆದ ಪಂದ್ಯದಲ್ಲಿ ಮೊದಲ ಬಾರಿ ಅತಿ ಹೆಚ್ಚು ರನ್ ಗಳಿಸಿದ ತಂಡವಾಗಿ ಬಿಳಿಯಂಡ್ರ ತಂಡ ಹೊರಹೊಮ್ಮಿತು.
ಬಿಳಿಯಂಡ್ರ ಸತ್ಯ ಹನ್ನೆರಡು ಸಿಕ್ಸರ್ನೊಂದಿಗೆ ೮೨ ರನ್ ಮಾಡಿ ಒಟ್ಟು ೧೧೦ ರನ್ ತಂಡಕ್ಕೆ ಗಳಿಸಿಕೊಟ್ಟರು. ಸುಳ್ಯಕೋಡಿ ಹಾಗೂ ಕುದುಕುಳಿ ಬಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುದುಕುಳಿ ಬಿ ತಂಡ ೨೮ ರನ್ ಗಳಿಸಿತು. ಸುಳ್ಯಕೋಡಿ ತಂಡ ೧೦ ವಿಕೆಟ್ಗಳ ಗೆಲುವು ಸಾಧಿಸಿತು. ಎಡಿಕೇರಿ ಮತ್ತು ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಬಿಳಿಯಂಡ್ರ ತಂಡ ೪೮ ರನ್ ಗಳಿಸಿದರೆ ಎಡಿಕೇರಿ ತಂಡ ಒಂಬತ್ತು ವಿಕೆಟ್ಗಳ ಜಯ ಸಾಧಿಸಿತು.
ಮುದ್ಯನ ತಂಡ ಭಾಗವಹಿಸದ ಕಾರಣ ನಿಡ್ಯ ಮಲೆ ತಂಡ ವಾಕ್ ಓವರ್ನಿಂದಾಗಿ ಸುಳ್ಯ ಕೊಡಿ ತಂಡದೊAದಿಗೆ ಸ್ಪರ್ಧಿಸಿತು. ನಿಡ್ಯಮಲೆ ತಂಡ ೨೭ ರನ್ ಗಳಿಸಿದರೆ ಸುಳ್ಯಕೋಡಿ ತಂಡ ೧೦ ವಿಕೆಟ್ ಗಳಿಂದ ಜಯ ಸಾಧಿಸಿತು. ಸುಳ್ಯಕೋಡಿ ಪವನ್ ೨೨ ರನ್ ಗಳಿಸಿದರು. ಸುಳ್ಯಕೋಡಿ ಮತ್ತು ಎಡಿಕೇರಿ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸುಳ್ಯಕೋಡಿ ತಂಡ ೬೭ ರನ್ ಗಳಿಸಿತು. ಎಡಿಕೇರಿ ತಂಡದ ವಿನು ೫೨ ರನ್ ಗಳಿಸುವುದರೊಂದಿಗೆ ಏಳು ವಿಕೆಟ್ಗಳ ಜಯ ಸಾಧಿಸಿ ಮುಂದಿನ ಹಂತ ಪ್ರವೇಶಿಸಿತು. -ಸುನಿಲ್