ಶ್ರೀಮಂಗಲ, ಏ. ೬: ಪೊನ್ನಂಪೇಟೆ ತಾಲೂಕು ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಬಾಚೀರ ಕಪ್ ಕೊಡವ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ೫ ತಂಡಗಳು ಮುನ್ನಡೆ ಗಳಿಸಿದ್ದು, ಕೊಳೇರ (೨೧/೭) ತಂಡದ ವಿರುದ್ಧ ಕರಿನೆರವಂಡ (೯೦/೨) ಜಯಗಳಿಸಿತು. ಬೊಜ್ಜಂಗಡ (೨೬/೫) ವಿರುದ್ಧ ಚಂಗುಲAಡ (೨೭/೪) ಗೆಲುವು ಸಾಧಿಸಿತು.

ಕೈಬುಲೀರ (೩೩/೨) ತಂಡದ ವಿರುದ್ಧ ಅಲ್ಲುಮಾಡ (೩೨/೮) ಗೆಲುವು ಸಾಧಿಸಿತು. ಅಚ್ಚಪಂಡ (೮೮/೨) ತಂಡ ಮಲ್ಲೇಂಗಡ (೧೬/೭) ವಿರುದ್ಧ ಜಯಗಳಿಸಿತು. ಚಂಗುಲAಡ (೨೯/೩) ತಂಡದ ವಿರುದ್ಧ ಅಚ್ಚಪಂಡ (೧೧೨/೧) ಜಯಗಳಿಸಿ ಮುಂದಿನ ಹಂತ ಪ್ರವೇಶಿಸಿತು.