ಮಡಿಕೇರಿ, ಏ. ೭: ಬಿರುನಾಣಿಯ ಪಾಕೇರಿನಾಡು ಶ್ರೀ ಪುತ್ತು ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೪ ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊAಡಿದ್ದು, ತಾ. ೧೨ ರವರೆಗೆ ಜರುಗಲಿದೆ.
ಈ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಪ್ರತಿದಿನ ನಡೆಯುತ್ತಿದೆ. ತಾ. ೮ ರಂದು (ಇಂದು) ಶ್ರೀ ಚಾಮುಂಡಿ ದೇವಿಯ ಬೇಡುಹಬ್ಬ ಜರುಗಲಿದೆ. ತಾ. ೯ ಹಾಗೂ ೧೦ ರಂದು ನಿಗದಿತ ಕೈಂಕರ್ಯಗಳು ನಡೆಯಲಿದ್ದು, ತಾ. ೧೧ ರಂದು ಬೆಳಿಗ್ಗೆ ೫ಕ್ಕೆ ದೇವರ ದರ್ಶನ, ಬೆಳಿಗ್ಗೆ ೬ ರಿಂದ ೭ ರವರೆಗೆ ತೂಚಂಬಲಿ ಪೂಜೆ, ೮ ಗಂಟೆಗೆ ಚಾಮುಂಡಿ ದೇವಿಗೆ ಹರಕೆ ಒಪ್ಪಿಸುವುದು, ಅಪರಾಹ್ನ ೩ಕ್ಕೆ ಪೊಮ್ಮಂಗಲ ದೇವಸ್ಥಾನಕ್ಕೆ ಹತ್ತುವುದು, ನೆರಪು ಸಂಜೆ ೫ಕ್ಕೆ ದೇವರ ದರ್ಶನ ರಾತ್ರಿ ಪಳ್ಳಿಬೇಟೆ (ಶಯನ) ಜರುಗಲಿದೆ.
ಉತ್ಸವದ ಅಂತಿಮ ದಿನವಾದ ತಾ. ೧೨ ರಂದು ಬೆಳಿಗ್ಗೆ ೧೧ಕ್ಕೆ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಸಂಜೆ ೫ಕ್ಕೆ ದೇವರ ದರ್ಶನ, ಅವಭೃತ ಸ್ನಾನ, ರಾತ್ರಿ ದೇವರ ನೃತ್ಯ, ದರ್ಶನ, ವಸಂತ ಪೂಜೆ ಜರುಗಲಿದೆ.