ಕರಿಕೆ, ಏ ೬: ತಾಲೂಕು ಸಹಾಯಕ ಚುನಾವಣಾಧಿಕಾರಿ ಮಡಿಕೇರಿಯ ತಹಶೀಲ್ದಾರ್ ಕಿರಣ್ ಗೌರಯ್ಯ ಜಿಲ್ಲೆಯ ಗಡಿ ಚೆಕ್ ಪೋಸ್ಟ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಡಗು ಕೇರಳದ ಗಡಿ ಭಾಗವಾದ ಕರಿಕೆ ಚೆಂಬೇರಿಯಲ್ಲಿ ಚುನಾವಣೆ ಅಕ್ರಮ ತಡೆಗೆ ಸಂಬAಧಿಸಿದAತೆ ಸ್ಥಾಪಿಸಿದ ಚೆಕ್ಪೋಸ್ಟ್ಗೆ ರಾತ್ರಿ ಭೇಟಿ ನೀಡಿ ಅಲ್ಲಿನ ಕರ್ತವ್ಯ, ಸಿಬ್ಬಂದಿಗಳಿಗೆ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ನಂತರ ವಾಹನಗಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಕಂದಾಯ ಪರಿವೀಕ್ಷಕ ಅನೂಪ್ ಸೇರಿದಂತೆ ಚುನಾವಣಾ ಕರ್ತವ್ಯ ಸಿಬ್ಬಂದಿಗಳು ಹಾಜರಿದ್ದರು