ಕೂಡಿಗೆ, ಏ. ೫: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದ ಆದಿಶಕ್ತಿ ದೇವಸ್ಥಾನದ ೫೦ನೇ ವಾರ್ಷಿಕೋತ್ಸವ ಮತ್ತು ದೇವರ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ವಾರ್ಷಿಕೋತ್ಸವ ಅಂಗವಾಗಿ ಗಣಪತಿ ಹೋಮ, ಕಂಕಣ ಕಟ್ಟುವುದು, ನಂತರ ಹಾರಂಗಿ ನದಿಯಿಂದ ಅಭ್ಯುಂಜನ ಶೃಂಗಾರ ಮಾಡಿ ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನಕ್ಕೆ ಕಳಸ ತರಲಾಯಿತು. ನಂತರ ಮೊವೆಳಕ್ಕು ಮೆರವಣಿಗೆ, ಅಗ್ನಿಚಟ್ಟಿ , ಮಹಾಮಂಗಳಾರತಿ, ಭಕ್ತಾದಿಗಳಿಂದ ಪೊಂಗಲ್ ಪೂಜೆ, ವಿವಿಧ ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ವಾರ್ಷಿಕೋತ್ಸವ ಅಂಗವಾಗಿ ಹುಲುಗುಂದ ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊAಡಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಹಾರಂಗಿ, ಹುದುಗೂರು, ಕುಶಾಲನಗರ, ಕಾಳಿದೇವನ, ಹೊಸೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದರು. ಈ ಸಂದರ್ಭದಲ್ಲಿ ಪೂಜಾ ಕೈಂಕರ್ಯಗಳನ್ನು ದೇವಸ್ಥಾನ ಪ್ರಧಾನ ಆರ್ಚಕ ಶರವಣ ಕಾಳಿಮುತ್ತು ತಂಡದವರು ನೆರವೇರಿಸಿತು. ದೇವಾಲಯ ಸಮಿತಿಯ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಸುಬ್ರಮಣಿ, ಪ್ರಮುಖರಾದ ಕಣ್ಣಯ್ಯ, ಮಂಜುನಾಥ ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.