ನಾಪೋಕ್ಲು, ಏ. ೫: ನಾಪೋಕ್ಲು ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಯಾಗಿದ್ದು ಧರೆಗೆ ತಂಪೆರೆದಿದೆ. ಬಲ್ಲಮಾವಟಿ, ನೆಲಜಿ, ಎಮ್ಮೆಮಾಡು, ಕಕ್ಕಬ್ಬೆ ವ್ಯಾಪ್ತಿಯಲ್ಲಿ ಮಳೆಯಾಗಿದ್ದು ಕೋಟೇರಿಯಲ್ಲಿ ಆಲಿಕಲ್ಲು ಸಹಿತ ೯೬ ಸೆಂಟ್ ಮಳೆಯಾಗಿದೆ. ಗಾಳಿ ಮಳೆಗೆ ನಾಪೋಕ್ಲು - ಕಕ್ಕಬೆ ಮುಖ್ಯ ಸಂಪರ್ಕ ರಸ್ತೆಗೆ ಕೋಟೇರಿಯಲ್ಲಿ ಅಡ್ಡಲಾಗಿ ಮರ ಒಂದು ಬಿದ್ದು ಸ್ವಲ್ಪ ಸಮಯ ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.